ಸಡಗರದ ವೀರಭದ್ರೇಶ್ವರ ಜಾತ್ರೆ

Must Read

ಸಿಂದಗಿ; ತಾಲೂಕಿನ ಮೋರಟಗಿ ಗ್ರಾಮದ ಭಕ್ತರ ಆರಾಧ್ಯ ದೇವ ಶ್ರೀ ವೀರಭದ್ರೇಶ್ವರ ಹಾಗು ಕಾಳಿಕಾ ಮಾತೆಯ ಜಾತ್ರಾ ಅಂಗವಾಗಿ ಗತ್ತರಗಿ ಭೀಮಾ ನದಿ ಸ್ನಾನ ದಿಂದ ವೀರಭದ್ರೇಶ್ವರ ಪಲ್ಲಕ್ಕಿ ಪುರ ಪ್ರವೇಶ ಅದ್ಧೂರಿಯಾಗಿ ನಡೆಯಿತು.

ಮೆರವಣಿಗೆಯಿಂದ ದೇವಸ್ಥಾನಕ್ಕೆ ಕುಂಭ ಕಲಶ ವಾದ್ಯ ಮೇಳ ಪುರವಂತರ ಸೇವೆ ರಂಗು ರಂಗಿನ ಮದ್ದು ಸುಡುವ ಮೂಲಕ ವೀರಭದ್ರೇಶ್ವರ ಜಾತ್ರೆ ಸಂಭ್ರಮ ಸಡಗರ ತಂದಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ವೀರಭದ್ರೇಶ್ವರ ಜಯ ಘೋಷದಲ್ಲಿ ಜಾತ್ರಾ ಸಂಭ್ರಮ ನಡೆಯಿತು.

ಜಾತ್ರೆಯ ಸಡಗರದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಅಭಿಷೇಕ ಕ್ಷೀರಾಭಿಷೇಕ ತುಪ್ಪದಭಿಷೇಕ ಬಾಳೆ ಹಣ್ಣಿನ ಸೇವೆ ಮಾದಲಿ ಸೇವೆ ಹಾಲು ಹುಗ್ಗಿ ಕರಿಗಡುಬು ತುಪ್ಪ ಹೀಗೆ ಹದನೈದು ದಿನಗಳ ಪರ್ಯಂತ ಭಕ್ತರ ಪ್ರಸಾದ ಸೇವೆ ನಡೆದು ಕೊನೆಯ ದಿನ ವಿವಿಧ ತರಕಾರಿ ಮಿಶ್ರಣದ ಬಜಿ ಪಲ್ಯೆ ಕಡಕ ರೊಟ್ಟಿ ಪ್ರಸಾದ ಅಮೋಘವಾಗಿತ್ತು.

ಅತ್ಯಂತ ಸುಂದರ ವೇದಿಕೆಯಿಂದ ಕಣ್ಣಿಗೆ ಹಿತ ಮನಸ್ಸಿಗೆ ಆನಂದ ತರುವಂಥ ಧಾರ್ಮಿಕ ಕಾರ್ಯಕ್ರಮ ಜನಮನಕ್ಕೆ ಸಂಭ್ರಮ ತಂದಿತು. ಯುವಕರು ಹಿರಿಯರು ಮಾತೆಯರು ಎಲ್ಲರ ಸಹಯೋಗದಲ್ಲಿ ಅದ್ಭುತ ಜಾತ್ರೆ ನಡೆಯಿತು.ಪ್ರಕಾಶ ಅಡಗಲ್ಲ ಶರಣು ಕೋಳಕೂರ ಸಂತೋಷ ಶಾಬಾದಿ ರೇವಣಸಿದ್ಧ ಮಸಳಿ ಡಾ||ರಾಜಶೇಖರ ಪತ್ತಾರ ಡಾ| ಆರ್.ಬಿ.ಕುಲಕರ್ಣಿ ಗುರುಪಾದಪ್ಪ ನೇಲ್ಲಗಿ ಶ್ರವಣಕುಮಾರ ದಸ್ಮಾ ಶ್ರೀ ಶೈಲ ಅಣಬಸ್ಟಿ ವಿದ್ಯಾಧರ ಮಳಗಿ ಭೂತಾಳಿ ಖಾನಾಪೂರ ಹಲವರ ಸೇವಾ ಕಾರ್ಯದಲ್ಲಿ ಜಾತ್ರೆ ಜರುಗಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group