ನನಗೆ ಅಪಾಯ ಮಾಡಲು ಸಂಚು -ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

Must Read

ಅಣ್ಣನಾದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಮೇಲೆ ನೇರ ಆರೋಪ

ಬೀದರ – ವಿಧಾನ ಪರಿಷತ್ ಚುನಾವಣೆ ಪಕ್ಷಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿಬಿಟ್ಟಿದ್ದು ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುವುದಷ್ಟೇ ಅಲ್ಲದೆ ಎರಡು ಕುಟುಂಬಗಳಲ್ಲಿ ಬಿಗ್ ಪೈಟ ನಡೆಯುತ್ತಿದೆ.

ಖಂಡ್ರೆ ವರ್ಸಸ್ ಖಂಡ್ರೆ ಕುಟುಂಬದಲ್ಲಿ ಘರ್ಷಣೆ ಆರಂಭವಾಗಿದೆ. ನಿನ್ನೆ ಈಶ್ವರ ಖಂಡ್ರೆಯವರು ದಮ್ ಇದ್ದರೆ ನನ್ನ ತಡೀರಿ ಎಂದರೆ, ಇಂದು ಅವರಣ್ಣ ಪ್ರಕಾಶ ಖಂಡ್ರೆಯವರು ಈಶ್ವರ ಅವರ ಹಿಂದೆ ಹಿಂದೆಯೇ ಹೋಗಿ ನಿಂತರು. ನಂತರ ಈಶ್ವರ ಖಂಡ್ರೆ ದುಡ್ಡು ಹಂಚುತ್ತಿದ್ದಾರೆ ಎಂದು ಆರೋಪಿಸಿ ಪ್ರಕಾಶ ಅವರ ಬೆಂಬಲಿಗರು ಅವರ ಕಾರನ್ನು ತಡೆದು ನಿಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ಈಶ್ವರ ಖಂಡ್ರೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ತನಗೆ ಅಪಾಯ ಮಾಡಲೆಂದೇ ಪ್ರಕಾಶ ಅವರು ಗೂಂಡಾಗಳನ್ನು ಕರಕೊಂಡು ಬಂದಿದ್ದರು ಎಂದು ನೇರ ಆರೋಪ ಮಾಡಿದ್ದಾರೆ.

ಇದರಿಂದ ವಿಪ ಅಖಾಡ ಗಂಭೀರ ಸ್ವರೂಪ ಪಡೆದುಕೊಂಡಂತಾಗಿದೆ.

ನನ್ನ ಕಾರು ಅಡ್ಡ ಗಟ್ಟಿ ಕೊಲೆ ಮಾಡಲು ಯತ್ನ ನಡೆದಿದೆ..ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆಯಲ್ಲಿ ನಾನು ಭಾಲ್ಕಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದೆ ನನ್ನ ಕಾರು ಬೆಳಿಗ್ಗೆ ಹಿಂಬಾಲಿಸಿದರು . ಜ್ಯಾಂತಿ ಗ್ರಾಮದಲ್ಲಿ ಪ್ರಕಾಶ್ ಖಂಡ್ರೆ ನನ್ನ ಕಾರು ಅಡ್ಡಗಟ್ಟಿ ಏನಾದರೂ ಮಾಡಿ ನನ್ನ ಜೀವಕೆ ಅಪಾಯವನ್ನು ಮಾಡಬೇಕು ಎಂದು ಹೊಂಚು ಹಾಕಿದರು.ನಾನು ನಿನ್ನೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ಫೋನ್ ಮುಖಾಂತರ ತಿಳಿಸಿದ್ದರೂ ಕೂಡ ನನಗೆ ಭದ್ರತೆ ನೀಡಿಲ್ಲ ಎಂದು ಹೇಳಿ, ಪೊಲೀಸ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆ ಆಗಿ ಕೆಲಸ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group