ಸಾಧನೆಗಳು ಸಾಧಕರ ಸ್ವತ್ತು ಸೋಮಾರಿಗಳ ಸ್ವತ್ತಲ್ಲ: ಮಲಕಣ್ಣ

Must Read

ಸಿಂದಗಿ: ಸಾಧನೆಗಳು ಸಾಧಕರ ಸ್ವತ್ತು ಸೋಮಾರಿಗಳ ಸ್ವತ್ತಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ವಿವಿಧ ರೀತಿಯ ಸಾಧನೆಗಳು ಇದ್ದೇ ಇರುತ್ತವೆ ಅವುಗಳನ್ನು ಸಾಧಿಸುವ ಛಲವಿರಬೇಕು ಅಂತಹ ಸಾಧನೆಗಳು ರಾಷ್ಟ್ರಮಟ್ಟದವರೆಗೆ ಕೊಂಡೊಯುತ್ತವೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಮಲಕಣ್ಣ ಗಡಿಗೆನ್ನವರ್ ಹೇಳಿದರು.

ತಾಲೂಕಿನ ಗೋಲಗೇರಿಯ ಎಂ.ಪಿ.ಎಸ್. ಶಾಲೆಯಲ್ಲಿ ಸ್ನೇಹ ಸಿಂಚನ ಬಳಗ ಹಾಗೂ ಜ್ಞಾನಜ್ಯೋತಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೋಲಗೇರಿ ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕನಕಶ್ರೀ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು, ಸ್ಥಳೀಯ ಕೆ.ಜಿ.ಎಸ್.ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ, ಶಿಕ್ಷಕರ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಎಚ್.ಪಿ.ಎಸ್. ಚಿಕ್ಕ ಅಲ್ಲಾಪೂರ ಶಾಲೆಯ ಶಿಕ್ಷಕ ಭೈರಪ್ಪ ಬನ್ನೆ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆಯಲ್ಲಿ ಸ್ಥಳೀಯ ಶಾಲೆಗಳಿಗೆ ಗ್ರಂಥದಾನ ಹಾಗೂ ವಿದ್ಯುತ್ ಸೌಕರ್ಯ ಕಲ್ಪಿಸಿದ ಅಬಕಾರಿ ಆರಕ್ಷಕ ಲಾಲಸಾಬ್ ಮೋಮಿನ್ ಅವರನ್ನು ಸತ್ಕರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಮಾತೆ ಬಿ.ವಿ.ಗೋಣಿ, ಮುಖ್ಯಗುರು ಆರ್.ಜಿ.ಬನಸಿ, ಶಿಕ್ಷಕರಾದ ಪಿ.ಎಂ.ಶೇಖ್, ಬಸಯ್ಯ ಜಾಲವಾದಿಮಠ, ಎಂ.ಎಸ್.ಮಣೂರ, ಬಸವರಾಜ ತುಂಬಗಿ, ನಿಂಗಣ್ಣ ಬಂಥನಾಳ, ವಿದ್ಯಾ ಅರಬಳ್ಳಿ, ಮಡಿವಾಳಪ್ಪ ನಾಯ್ಕೋಡಿ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಕರ್ನಾಳ, ಕುತ್ಬುದ್ದೀನ್ ಕೋರಬು, ನಜೀರ್ ಕೋರಬು, ಬಾಬು ಜಾಲವಾದಿ, ಮೈಬೂಬ್ ದೊಡಮನಿ, ಮಹಾಂತೇಶ್ ಗೋಂಧಳಿ, ವಿನೋದ ಹಂಚಿನಾಳ, ರಾಜಶೇಖರ್ ಕರ್ನಾಳ ಸೇರಿದಂತೆ ಇನ್ನಿತರರಿದ್ದರು.

ಕು.ಲಕ್ಷ್ಮಿ ಯಂಕಂಚಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಮಹೇಶ್ ಬಿರಾದಾರ ನಿರೂಪಿಸಿದರು, ಶಿವಶಂಕರ ಪೂಜಾರಿ ಸ್ವಾಗತಿಸಿದರು, ಶಿವರಾಜ ತಳವಾರ ವಂದಿಸಿದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group