ಮದುವೆ ಮಂಟಪದಲ್ಲಿ ಪರಿಸರ ಜಾಗೃತಿ

Must Read

ಸಿಂದಗಿ: ಮನುಷ್ಯ ಪ್ರಕೃತಿಯಲ್ಲಿ ಹುಟ್ಟಿ ಪ್ರಕೃತಿಯಲ್ಲಿ ಬದುಕಿ ಬಾಳುತ್ತಾನೆ. ತನಗೆ ಬೇಕಾದ ಎಲ್ಲವನ್ನು ಪ್ರಕೃತಿಯಿಂದಲೇ ಪಡೆಯುತ್ತಾನೆ ನಮ್ಮ ಸುತ್ತಮುತ್ತಲಿನ ಪರಿಸರವೇ ಸೃಷ್ಟಿಯ ಪ್ರತಿಯೊಂದು ಜೀವಿಯ ಆಗರವಾಗಿದೆ ಪರಿಸರವನ್ನು ರಕ್ಷಣೆ ಮಾಡಿ ಎಂಬ ಉತ್ತಮ ಸಂದೇಶವನ್ನು ತಿಳಿಸುವ ಮೂಲಕ ಮಾಂಗಲ್ಯಧಾರಣ ವ ಅಕ್ಷತಾರೋಪಣದೊಂದಿಗೆ ವಧು-ವರರಿಗೆ ಕೈಗೆ ಸಸಿಯನ್ನು ನೀಡಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಪಟ್ಟಣದ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಯಂಕಂಚಿ ಗ್ರಾಮದ ರೈತಾಪಿ ಶ್ರೀಮತಿ ಸಾತೀರಮ್ಮ (ಚಿಕ್ಕಮ್ಮ)ಶ್ರೀ ಮರೇಪ್ಪ ದುಂಡಪ್ಪ ಅಗಸರ ಅವರ ಸುಪುತ್ರ ಮಾಂತೇಶ ಜೊತೆ ಸುಪ್ರೀಯಾ ತಾಲೂಕಿನ ಮುರಡಿ ಗ್ರಾಮದ ಶ್ರೀಮತಿ ಪ್ರೇಮಾ ಶ್ರೀ ಬಸವರಾಜ ಚಂದ್ರಾಮಪ್ಪ ಅಗಸರ ಅವರ ಸುಪುತ್ರಿಯೊಂದಿಗೆ ಜರುಗಿದ ಮದುವೆಯಲ್ಲಿ ವಧು- ವರರ ಮುಖಾಂತರ ಸಸಿಗಳು ನೀಡುವ ಮೂಲಕ ಪ್ರಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ, ಆದ್ದರಿಂದ ಪ್ರಕೃತಿಯನ್ನು ಪ್ರಕೃತಿಮಾತೆ ಎನ್ನಬೇಕೆಂದು ಮದುವೆಯಲ್ಲಿ ಭಾಗವಹಿಸಿದವರಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಮಲ್ಲಮ್ಮ, ಶರಣಪ್ಪ ಅಗಸರ,ಶ್ರೀಮತಿ ಶಂಕ್ರೆಮ್ಮ, ಶಂಕ್ರೆಪ್ಪ ಅಗಸರ,ಶ್ರೀಮತಿ ಗುರುಬಾಯಿ, ಡಾ.ರಾಮಲಿಂಗಪ್ಪ ಅಗಸರ, ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕರಾದ ಎ.ಎಂ.ಮಡಿವಾಳರ, ಕುದರಸಾಲವಾಡಗಿಯ ಪ್ರಾ.ಕೃ ಪ ಸಹಕಾರಿ ಬ್ಯಾಂಕಿನ ನಿವೃತ ಮ್ಯಾನೇಜರ ಮಲ್ಲಣ್ಣ ವ್ಹಿ ಅಣ್ಣೆಪ್ಪನವರ, ವಿಶ್ರಾಂತ ಉಪನ್ಯಾಸಕ ಪಿ ಎಂ ಮಡಿವಾಳರ, ಪ್ರಾ. ಶ್ರೀಶೈಲ ಮಡಿವಾಳರ, ಕೆ ಪಿ ಟಿ ಸಿ ಎಲ್ ಸಹ ಅಧಿಕಾರಿ ಬಸವರಾಜ ಮಡಿವಾಳ ತಾಳಿಕೋಟಿ, ಮಿರಜ ರೈಲ್ವೆ ಅಧಿಕಾರಿ ಲಕ್ಷ್ಮೇಶ್ವರ ನಿಂಬಾಳ, ಮುಖ್ಯ ಗುರು ಶಿವಾನಂದ ಶಹಾಪೂರ, ಮಡಿವಾಳ ಸಂಘದ ಅಧ್ಯಕ್ಷ ಈರಣ್ಣ ಅಗಸರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group