ಗೆಲವು ಮುಂಚೆ ಪ್ರಿಂಟ್ ಹಾಕಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಕಾಶ್ ಖಂಡ್ರೆ

Must Read

ಬೀದರ – ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದ ಎನ್ನುವ ನಾಣ್ನುಡಿಯಂತೆ ವಿಪ ಚುನಾವಣೆಯ ಎಣಿಕೆ ಮುಂಚೆಯೇ ಬಿಜೆಪಿ ಅಭ್ಯರ್ಥಿ ತಮ್ಮ ಗೆಲುವಿನ ಬಗ್ಗೆ ಪ್ರಿಂಟ್ ಹಾಕಿಸಿದ ಘಟನೆ ನಡೆದಿದೆ.

ಬೀದರನಲ್ಲಿ ಭಾರತಿಯ ಪಕ್ಷದ ಅಭ್ಯರ್ಥಿಯಾದ ಪ್ರಕಾಶ ಖಂಡ್ರೆ ಅವರು ಮತ ಎಣಿಕೆ ಕಾರ್ಯ ಪ್ರಾರಂಭ ಮಾಡುವ ಮೊದಲೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಫ್ಲೆಕ್ಸ್ ಬೋರ್ಡ್ ಗಳ ಪ್ರಿಂಟಿಂಗ್ ಕಾರ್ಯ ಪ್ರಾರಂಭಿಸಿರುವದನ್ನು ನೋಡಿದರೆ ಕೂಸು ಹುಟ್ಟುವ ಮೊದಲೆ ಕುಲಾಯಿ ಹೋಲಿಸಿದ ಕಾರ್ಯ ಮಾಡಿದ್ದಾರೆ.

ಅಲ್ಲದೆ ಕಾಂಗ್ರೆಸ್ ಪಕ್ಷದವರ ಆರೋಪದಂತೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ತಮ್ಮ ಅಧಿಕಾರದ ಬಲ ಪ್ರಯೋಗ ಮಾಡಿ ಚುನಾವಣಾ ಆಯೋಗವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಶತಾಯಗತಾಯ ತಮ್ಮ ಅಭ್ಯರ್ಥಿಯ ಗೆಲುವಿಗೆ ಅಕ್ರಮ ಮಾಡಿದ್ದಾರಾ ಎಂಬ ಅನುಮಾನವನ್ನು ಜನತೆ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿಯವರ ಈ ನಡೆ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು ಚುನಾವಣೆ ಫಲಿತಾಂಶ ಯಾರ ಕೊರಳಿಗೆ ಮಾಲೆ ಹಾಕುವುದೋ ಕಾದು ನೋಡಬೇಕು

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group