ಸಿಂದಗಿ– ತಾಲೂಕಿನ ಯಂಕಂಚಿ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ಯಂಕಂಚಿ ಗ್ರಾಮದಿಂದ ಮಾಡಬಾಳ ಗ್ರಾಮಕ್ಕೆ ಕೂಡುವ ರಸ್ತೆ ಕಾಮಗಾರಿ ಕಾರ್ಯದ ಶ್ರೇಯಸ್ಸು ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರಿಗೆ ಸಲ್ಲುತ್ತದೆ ಎಂದು ಗುತ್ತಿಗೆದಾರ ಚೇತನಗೌಡ ಪಾಟೀಲ ಹೇಳಿದರು.
ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ದಿ.ಎಮ್.ಸಿ.ಮನಗೂಳಿ ಅವರ ಅಧಿಕಾರದ ಅವಧಿಯಲ್ಲಿ ಗ್ರಾಮಸ್ಥರೆಲ್ಲರು ಸೇರಿ ಮನವಿ ಮಾಡಿಕೊಂಡಿದ್ದೆವು. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮಾತಿಗೆ ತಲೆಬಾಗಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ಈ ರಸ್ತೆ ಕಾಮಗಾರಿಯಾದರೆ ನೂರಾರು ರೈತರಿಗೆ ಇದು ಅನುಕೂಲವಾಗಲಿದೆ. ಕೃಷ್ಣಾ ಭಾಗ್ಯ ಜಲನಿಗಮದ ಅಡಿಯಲ್ಲಿ ರೂ. 365 ಲಕ್ಷಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು ಈ ಭಾಗದ ಜನರಿಗೆ ಅತ್ಯಂತ ಸಂತಸ ತಂದಿದೆ. ದಿ.ಎಮ್.ಸಿ.ಮನಗೂಳಿ ಅವರು ನಮ್ಮೊಂದಿಗೆ ಇಲ್ಲವಾದರು ಅವರು ಮಾಡಿದ ಯೋಜನೆಗಳು ನಮ್ಮೊಂದಿಗೆ ಇವೆ. ಯಂಕಂಚಿ ಮತ್ತು ಮಾಡಬಾಳ ಗ್ರಾಮಸ್ಥರ ಪರವಾಗಿ ಅವರ ಕುಟುಂಬಕ್ಕೆ ಅಭಿನಂದನೆಗಳು ಎಂದು ಚೇತನಗೌಡ ಪಾಟೀಲ ತಿಳಿಸಿದ್ದಾರೆ.