Homeಸುದ್ದಿಗಳುರ‍್ಯಾಗಿಂಗ್ ಮತ್ತು ಲೈಂಗಿಕ ದೌರ್ಜನ್ಯ ಕುರಿತು ಕಾರ್ಯಕ್ರಮ

ರ‍್ಯಾಗಿಂಗ್ ಮತ್ತು ಲೈಂಗಿಕ ದೌರ್ಜನ್ಯ ಕುರಿತು ಕಾರ್ಯಕ್ರಮ

ಮುನವಳ್ಳಿ : ಪಟ್ಟಣದಲ್ಲಿ ಅಜ್ಜಪ್ಪ ಗಡಮಿ ಹಾಗೂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮುನವಳ್ಳಿ ಗುರುವಾರದಂದು ರ‍್ಯಾಗಿಂಗ್ ಮತ್ತು ಲೈಂಗಿಕ ದೌರ್ಜನ್ಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್, ಜಿ ಚುಳಕಿ ಮುಖ್ಯ ಅತಿಥಿಗಳಾಗಿ ಸವದತ್ತಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ ಗುಡಗನಟ್ಟಿ ಮುನವಳ್ಳಿ ಯ ಅಸಿಸ್ಟೆಂಟ್ ಸಬ್ ಇನಸ್ಪೆಕ್ಟರ್ ಬಿ.ಆರ್ ಸಣ್ಣಮಾಲಗಿ ಪೋಲಿಸ್ ಇಲಾಖೆಯ ಐ,ಪಿ ಸಂಗೊಳ್ಳಿ,ಆಡಳಿತ ಅಧಿಕಾರಿಗಳಾದ ಅಮೀತ ಕರಿಕಟ್ಟಿ, ಪ್ರೊ ಎ ಎಸ್ ಅಮೋಘಿಮಠ, ಎಸ್. ಪಿ. ಜೆ. ಜಿ. ಪ್ರೌಢಶಾಲೆಯ ಮುಖ್ಯಾಧ್ಯಾಪಕಿಯರಾದ ಅನ್ನಪೂರ್ಣ, ಪಿ ಲಂಬೂನವರ,ದೈಹಿಕ ಶಿಕ್ಷಕ ಮೋಹನ ಕಾಮನ್ನವರ, ಪ್ರೊ. ಎಸ್ ಎ ಯಲಿಗಾರ್ ಉಪಸ್ಥಿತರಿದ್ದರು.

ಶಿವಾನಂದ ಗುಡಗನಟ್ಟಿಯವರು ಮಾತನಾಡಿ, “ಕೆಲಸದ ಸ್ಥಳದಲ್ಲಿ ಮಹಿಳೆ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ೨೦೧೩ರಲ್ಲಿವಿಶೇಷ ಕಾಯ್ದೆ ರಚಿಸಲಾಗಿದೆ. ಮನೆಗೆಲಸದ ಮಹಿಳೆ ಸೇರಿದಂತೆ ಖಾಸಗಿ, ಸರಕಾರಿ ಕಚೇರಿ ಸೇರಿ ಎಲ್ಲ ಕೆಲಸ ಮಾಡುವ ಸ್ಥಳದಲ್ಲಿಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಯುವ ಆಶಯ ಕಾಯ್ದೆಯದ್ದಾಗಿದೆ. ತಾಲೂಕು ಮಟ್ಟದಲ್ಲಿ ಮಹಿಳಾ ಅಧಿಕಾರಿ ನೇತೃತ್ವದ ಸಮಿತಿ ಇದೆ. ಅದಕ್ಕೆ ದೂರು ನೀಡಲು ಅವಕಾಶ ಇದೆ. ದೂರು ಪರಿಶೀಲಿಸಿ, ಅದನ್ನು ಜಿಲ್ಲಾಮಟ್ಟದ ಸಮಿತಿಗೆ ಸಲ್ಲಿಸಿ ಅದು ನಿಜವಾದಲ್ಲಿ ಸಮಿತಿ ಅಥವಾ ಸಂತ್ರಸ್ತೆ ನ್ಯಾಯಾಲಯಕ್ಕೆ ದೂರು ನೀಡಲು ಅವಕಾಶ ಕಲ್ಪಿಸಿದೆ. ಅಶ್ಲೀಲ ಸಂದೇಶ, ಮಾತುಗಳೂ ಕೂಡ ಕಾಯ್ದೆ ವ್ಯಾಪ್ತಿಗೆ ಬರುತ್ತವೆ ಎಂದರು. ಕಾಲೇಜುಗಳಲ್ಲಿ ರ‍್ಯಾಗಿಂಗ್ ಮಾಡುವುದು ಕೂಡ ಅಪರಾಧ.ಮಕ್ಕಳಲ್ಲಿ ಉತ್ತಮ ಸಂಸ್ಕಾರ ಇರಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಪೊಲೀಸರ ಕಾರ್ಯವೈಖರಿ ಮತ್ತು ಕಾನೂನು ಅರಿವಿನ ಬಗ್ಗೆ” ಮಾಹಿತಿ ನೀಡಿದರು.ಈ ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ ಆರ್ ಎಚ್ ತಿಗಡಿ ನಡೆಸಿಕೊಟ್ಟರು.

RELATED ARTICLES

Most Popular

error: Content is protected !!
Join WhatsApp Group