ನಿಪ್ಪಾಣಿ ಜೊಲ್ಲೆ ಮಹಾವಿದ್ಯಾಲಯದಲ್ಲಿ ವಿಶ್ವ ಮಾನವ ದಿನ ಡಾ ಕುವೆಂಪು ಆಚರಣೆ

Must Read

ನಿಪ್ಪಾಣಿ – ಗೌರವಾನ್ವಿತ ಜೊಲ್ಲೆ ದಂಪತಿಗಳ ಸಾರಥ್ಯದ ನಿಪ್ಪಾಣಿಯ ಜೊಲ್ಲೆ ಮಹಾವಿದ್ಯಾಲಯದಲ್ಲಿ ಕನ್ನಡನಾಡಿನ ಶ್ರೇಷ್ಠ ಕವಿ ಯುಗದ ಕವಿ ರಾಷ್ಟ್ರಕವಿ ಡಾ. ಕುವೆಂಪು ಜಯಂತಿ ವಿಶ್ವ ಮಾನವ ದಿನ ಆಚರಿಸಲಾಯಿತು ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕಿ ಸೌ. ಉಜ್ವಲಾ ಸಪ್ತಸಾಗರ ಮಾತನಾಡಿದರು.

ಕನ್ನಡದ ಕವಿ ಡಾ. ಕುವೆಂಪು ಅವರ ಮಾನವೀಯ ಸಂದೇಶಗಳ ಕುರಿತು ಉಪನ್ಯಾಸ ಜರುಗಿತು ಈ ಸಂದಭ೯ದಲ್ಲಿ ಮಾತನಾಡಿದ ಉಪನ್ಯಾಸಕ ಮಿಥುನ ಅಂಕಲಿ ಅವರು ಡಾ. ಕುವೆಂಪು ಕನ್ನಡ ನಾಡು ಕಂಡ ಶ್ರೇಷ್ಠ ಕವಿ ಯುಗದ ಕವಿ .ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡ ನುಡಿಯ ಏಳಿಗೆಗೆ ದುಡಿದ ರಸದಕವಿ.ಹಲವಾರು ಕಾವ್ಯ ಕವನಗಳ ಮೂಲಕ ಕ್ರಾಂತಿಯ ಮಾನವೀಯ ಸಂದೇಶಗಳನ್ನು ನೀಡಿದ ಕವಿ ಡಾ. ಕುವೆಂಪು ಕನ್ನಡನಾಡಿನ ಅಮೋಘ ರತ್ನ.ಮನುಜಮತ ವಿಶ್ವಪಥ ಅವರ ಸಂಕಲ್ಪ.ಅವರ ಸಾಥ೯ಕ ಜೀವನ,ಮಾನವೀಯತೆಗೆ ಮಿಡಿದ ಕಳಕಳಿಯ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯ ರಮೇಶ್ ರಾಬತೆ ವಹಿಸಿದ್ದರು. ಪ್ರಾರಂಭದಲ್ಲಿ ನಾಡಗೀತೆ ಜರುಗಿತು ಡಾ. ಕುವೆಂಪು ಅವರ ಭಾವಚಿತ್ರ ಪೂಜೆ ನೆರವೇರಿಸಲಾಯಿತು. ಈ ಸಂದಭ೯ದಲ್ಲಿ ಪದವಿಪೂರ್ವ ಪ್ರಾಚಾರ್ಯ ಗುರುನಾಥ ಸದಲಿಗೆ, ವಿಭಾಗಗಳ ಮುಖ್ಯಸ್ಥರಾದ ಕು ಶೃತಿ ಬುಜಿ೯, ಭರಮಾ ಪೂಜಾರಿ,ಎಲ್ಲ ಅಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಧ್ಯಾಪಕಿ ಸೌ. ಪೂಜಾ ಗುರವ ಸ್ವಾಗತಿಸಿದರು. ಕನ್ನಡ ಅಧ್ಯಾಪಕಿ ಸೌ. ಮಹಾನಂದಾ ಕುಂಬಾರ ನಿರೂಪಿಸಿದರು. ಮಂಗೇಶ ಕೊಲಪ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group