ಕುವೆಂಪು ಅವರಿಗೆ ಗೌರವ ಸಲ್ಲಿಸಿದ ವಿದ್ಯಾರ್ಥಿಗಳು

Must Read

ಸಿಂದಗಿ: ಕನ್ನಡದ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ನಾವು ಎಲ್ಲರೂ ಅವರಿಗೆ ಗೌರವಯುತ ನಮನ ಸಲ್ಲಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳಾದ ಗುರುರಾಜ ಶ್ರೀಶೈಲ ಬಿರಾದಾರ, ಸಂದೀಪ ಬಸವರಾಜ ಬಡಿಗೇರ,ಭಾಗಮ್ಮ ಜಾನಪ್ಪ ಬಿರಗೊಂಡ,ಸುಸ್ಮೀತಾ ಮಲ್ಲಿಕಾರ್ಜುನ ದೇವರಮನಿ,ಜ್ಯೋತಿ ದಯಾನಂದ ಹಿರೇಮಠ ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಶಾಲಾ ಶಿಕ್ಷಕ ಎನ್.ಎಂ.ಚಪ್ಪರಬಂದ, ನಿಂಗನಗೌಡ ಪಾಟೀಲ,ಚಂದ್ರಶೇಖರ ಬೂಯ್ಯಾರ,ಬಸವರಾಜ ಅಗಸರ, ಸುಮಂಗಲಾ ಕೆಂಭಾವಿ, ಮಲ್ಲಮ್ಮ ಹಿಪ್ಪರಗಿ, ಶ್ರೀದೇವಿ ಕುರ್ಲೆ, ಅಕ್ಷತಾ ಉಡಕೇರಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group