ದೇವರ ಹಿಪ್ಪರಗಿ: ಅತಂತ್ರ ಪಟ್ಟಣ ಪಂಚಾಯಿತಿ

Must Read

ಸಿಂದಗಿ: ದೇವರಹಿಪ್ಪರಗಿ ಪಂಪಂ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಕುತೂಹಲ ಮೂಡಿಸಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಅತಂತ್ರ ಪರಿಸ್ಥಿತಿ ಉಂಟಾಗಿ ಅಧ್ಯಕ್ಷ ಗಾದಿಗೆ ಯಾವ ಅಭ್ಯರ್ಥಿ ಏರುತ್ತಾನೆ ಎಂಬುದು ಗೊಂದಲ ಸೃಷ್ಟಿಸಿದೆ.

  • ಪಪಂ 17 ವಾರ್ಡಗಳಲ್ಲಿ 07 ಕಾಂಗ್ರೆಸ್, 04 ಜೆಡಿಎಸ್ 04 ಬಿಜೆಪಿ ಹಾಗೂ 02 ಪಕ್ಷೇತರರು ಆಯ್ಕೆಯಾಗಿದ್ದಾರೆ.
  • ವಾರ್ಡ ಸಂಖ್ಯೆ 01 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರೀಫಾಬೇಗಂ ಅಬ್ದುಲ್ಲಾ ಬಾಗವಾನ ಅವರು 314 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 02 ರಲ್ಲಿ ಜೆಡಿಎಸ್ ಪಕ್ಷದಿಂದ ಜಯಶ್ರೀ ಬಸಪ್ಪ ದೇವಣಗಾಂವ 237 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
  • ವಾರ್ಡ ಸಂಖ್ಯೆ 03ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಾಸುಗೌಡ ಮುದಿಗೌಡ ಬಿರಾದಾರ(ಜಲಕತ್ತಿ) 326 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 04ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ರತ್ನವ್ವ ಚಿದಾನಂದ ದೇವೂರ 182 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
  • ಅದರಂತೆ ವಾರ್ಡ ಸಂಖ್ಯೆ 05ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಂಗಳೇಶ್ವರ ರಾಜಪ್ಪ ಕಡ್ಲೇವಾಡ 472 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
  • ವಾರ್ಡ ಸಂಖ್ಯೆ 06ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಾ. ಗುರುರಾಜ ಗಡೇದ 362 ಮತಗಳನ್ನು ಪಡೆದುಕೊಂಡು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
  • ವಾರ್ಡ ಸಂಖ್ಯೆ 07ರಲ್ಲಿ ಜೆಡಿಎಸ್ ವತಿಯಿಂದ ಸ್ಪರ್ಧಿಸಿದ್ದ ಶಾಂತಯ್ಯ ಪಡದಯ್ಯ ಜಡಿಮಠ 294 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 08ರಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಕಾಶೀನಾಥ ಬಸಪ್ಪ ಬಜಂತ್ರಿ 445 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 09ರಲ್ಲಿ ಕಾಂಗ್ರೆಸ್ ಪಕ್ಷದ ಉಮೇಶ ಸೈದಪ್ಪ ರೂಗಿ 477 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 10ರಲ್ಲಿ ಕಾಂಗ್ರೆಸ್ ಪಕ್ಷದ ಕಾಸಪ್ಪ ರಾವುತಪ್ಪ ಜಮಾದಾರ 311 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ.
  • ವಾರ್ಡ ಸಂಖ್ಯೆ 11ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೋಭಾ ಮಡಿವಾಳಪ್ಪ ಮಲ್ಹಾರಿ 333 ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 12ರಲ್ಲಿ ಜೆಡಿಎಸ್ ಅಭ್ಯರ್ಥಿ ಸಿಂದೂರ ಡಾಲೇರ್ 370 ಮತಗಳನು ಪಡೆಯುವ ಮೂಲಕ ಗೆಲುವು ಸಾಸಿದ್ದಾರೆ.
  • ವಾರ್ಡ ಸಂಖ್ಯೆ 13ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ರಮೇಶ ಗುರಪ್ಪ ಮಸಬಿನಾಳ 292 ಮತಗಳನ್ನು ಪಡೆಯುವುದರ ಮೂಲಕ ವಿಜಯಶಾಲಿಯಾಗಿದ್ದಾರೆ.
  • ವಾರ್ಡ ಸಂಖ್ಯೆ 14ರಲ್ಲಿ ಜೆಡಿಎಸ್ ವತಿಯಿಂದ ಸ್ರ್ಪಸಿದ್ದ ಸುಮಂಗಲಾ ಮೋಹನ ಸೇಬೆನವರ 233 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ 15ರಲ್ಲಿ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಿದ್ದ ಬಶೀರಹ್ಮದ್ ಮಾಣಿಕಸಾಬ ಕಸಾಬ (ಬೇಪಾರಿ)457 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ವಾರ್ಡ ಸಂಖ್ಯೆ ಅ6ರಿಂದ ಸ್ರ್ಪಸಿದ್ದ ಕಾಂಗ್ರೆಸ್‍ನ ಸಲೀಮಾ ನಬಿರಸೂಲ ಮಣೂರ 320 ಮತಗಳನ್ನು ಪಡೆದು ಗೆದ್ದು ಬಂದಿದ್ದಾರೆ.
  • ಅದರಂತೆ ವಾರ್ಡ ಸಂಖ್ಯೆ 17 ಬಿಜೆಪಿಯಿಂದ ಸ್ರ್ಪಸಿದ್ದ ದಾನಾಬಾಯಿ ಡೊಂಗ್ರು ಚವ್ಹಾಣ 286 ಮತಗಳನ್ನು ಪಡೆಯುವುದರ ಮೂಲಕ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.

ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group