ಮೂಡಲಗಿ: ಭಕ್ತಿ ಭಾವದಿಂದ ಸೇವೆ ಮಾಡುವುದರಿಂದ ನೆಮ್ಮದಿ ಸಾಧ್ಯವಾಗುತ್ತದೆ ಮಠ ಮಂದಿರಗಳು ಸತತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಇದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಡಿ-02 ರಂದು ಶ್ರೀ ಶಿವಭೋಧರಂಗ ಸಂಸ್ಥಾನ ಮಠದ ನೂತನ ಶ್ರೀಗಳು ಪೀಠಾರೋಹಣ ಅಲಂಕರಿಸಿದ ಸಂದರ್ಭದಲ್ಲಿ ಶ್ರೀ ದತ್ತಾತ್ರೇಯಬೋಧ ಶ್ರೀಪಾದ ಬೋಧ ಸ್ವಾಮಿಜೀ ಹಾಗೂ ಶ್ರೀ ಶ್ರೀಧರ ಶ್ರೀಪಾದಬೋಧ ಸ್ವಾಮೀಜಿಗಳನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಧಾರ್ಮಿಕ ಕೇಂದ್ರಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಮುಂದಿನ ಯುವಪೀಳಿಗೆ ಮಠ, ಮಂದಿರಗಳ ಸಂಪರ್ಕಹೊಂದಿ ಭಕ್ತಿಭಾವ ಮುಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ನಗರದ ದಾನಮ್ಮದೇವಿ ದೇವಸ್ಥಾನ ಹಾಗೂ ಅಯ್ಯಪ್ಪಸ್ವಾಮಿ ಮಹಾಪೂಜೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಪ್ಪ ನೇಮಗೌಡರ, ಪ್ರಕಾಶ ಮಾದರ, ಮಲ್ಲಪ್ಪ ಮದಗುಣಕಿ, ಮಹಾದೇವ ಶೆಕ್ಕಿ, ಡಾ. ಬಿ. ಎಂ. ಪಾಲಭಾವಿ, ಮುದಕಪ್ಪ ಕುರಬಗಟ್ಟಿ, ಮಹಾಲಿಂಗ ವಂಟಗೂಡಿ, ಕೇದಾರಿ ಭಸ್ಮೆ, ಈಶ್ವರ ಮುರಗೋಡ, ಪಾಂಡು ಮಹೇಂದ್ರಕರ, ಶ್ರೀಕಾಂತ ಕೌಜಲಗಿ, ಶ್ರೀಶೈಲ ತುಪ್ಪದ, ಭಗವಂತ ಪತ್ತಾರ, ಈರಪ್ಪ ಢವಳೇಶ್ವರ, ಚೇತನ ನಿಶಾನಮಠ, ರವಿ ನೇಸೂರ, ಕೃಷ್ಣಾ ಗಿರೆಣ್ಣವರ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.