ಶಿಕ್ಷಣದ ಸಾರ್ವತ್ರೀಕರಣದ ನಿಟ್ಟಿನಲ್ಲಿ ಸಮನ್ವಯ ಶಿಕ್ಷಣ ಪರಿಣಾಮಕಾರಿಯಾಗಿರಲಿ – ಬಸವರಾಜ ನಾಲತವಾಡ

Must Read

ಬೆಳಗಾವಿ: ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಇತರೆ ಮಕ್ಕಳಂತೆ ಬೆಳೆಯಲು ವಿಕಾಸ ಹೊಂದಲು ಸಹಾಯಕವಾಗುವ ಸಮನ್ವಯ ಶಿಕ್ಷಣ ಪರಿಣಾಯಕಾರಿಯಾಗಿರಲಿ. ಮೂರು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಪಡೆದುಕೊಂಡು ವರ್ಗ ಕೋಣೆಯಲ್ಲಿ ಅದರ ಫಲಶ್ರುತಿ ಮೂಡಿಸಿ ಎಂದು ಜಿಲ್ಲಾ ಉಪನಿರ್ದೇಶಕ (ಆಡಳಿತ) ರಾದ ಬಸವರಾಜ ನಾಲತವಾಡ ಕರೆ ನೀಡಿದರು.

ಅವರು ಬೆಳಗಾವಿ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂರು ದಿನಗಳ ಸಮನ್ವಯ ಶಿಕ್ಷಣ ಸಾಮರ್ಥ್ಯ ಆಧಾರಿತ ತರಬೇತಿ ಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಿ. ವೈ. ಪಿ. ಸಿ. ಬಸವರಾಜ ಮಿಲ್ಲಾನಟ್ಟಿ. ಕೆ. ಎಸ್. ನಂದೇರ.ಸಹಾಯಕ ಯೋಜನಾ ಸಮನ್ವಯಾಧಿಕಾರಿ ಗಳಾದ ಸಲೀಂ ನದಾಫ. ರವಿಕುಮಾರ ಮೆಳವಂಕಿ, ನಗರ ಕ್ಷೇತ್ರ ಸಮನ್ವಯಾಧಿಕಾರಿ ಗಳಾದ ರಿಜ್ವಾನ್ ನಾವಗೇಕರ,ತಾಂತ್ರಿಕ ಸಹಾಯಕರಾದ ರೋಹಿಣಿ ನಾಯ್ಕ,ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎಸ್. ಎನ್. ಕಮ್ಮಾರ,ವೈ. ಬಿ. ಕಡಕೋಳ, ಸಂಗಮೇಶ ಕೊಂತಿ,ಶಿವಾನಂದ ಹುಲಗಬಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಗಾವಿಯ ಚವಾಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಜರುಗಿದ ತರಬೇತಿಯನ್ನು ಸಸಿಗೆ ನೀರುಣಿಸುವ ಮೂಲಕ ಡಿ. ವೈ. ಪಿ. ಸಿ. ಬಸವರಾಜ ಮಿಲ್ಲಾನಟ್ಟಿ ಉದ್ಘಾಟಿಸಿ ಮಾತನಾಡುತ್ತಾ, “ತರಬೇತಿ ಗಳು ಪುನಶ್ಚೇತನ ಮೂಡಿಸುವ ಜೊತೆಗೆ ಸಂವಾದಗಳ ಮೂಲಕ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ವಿಕಲಚೇತನ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಏನನ್ನು ಮಾಡಲು ಸಾಧ್ಯ ಎಂಬುದನ್ನು ಧನಾತ್ಮಕ ಚಿಂತನೆ ಯೊಂದಿಗೆ ಪರಿಣಾಮಕಾರಿಯಾಗಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳಿಗೆ ಅನುಕೂಲ ಒದಗಿಸುವಂತೆ” ಕರೆ ನೀಡಿದರು. ಡಿ. ವೈ. ಪಿ. ಸಿ ಯವರಾದ ಕೆ. ಎಸ್. ನಂದೇರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ” ತಮ್ಮ ವ್ಯಾಪ್ತಿಯಲ್ಲಿ ವಿಕಲಚೇತನ ಮಕ್ಕಳ ಗುರುತಿಸುವ ಜೊತೆಗೆ ಅವರನ್ನು ದಾಖಲಿಸುವ ಮತ್ತು ಎಸ್. ಎ. ಟಿ. ಎಸ್. ನಲ್ಲಿ ಇಂದೀಕರಿಸುವ ಮೂಲಕ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಅನುಕೂಲ ಮಾಡಿಕೊಡಲು ಸರಕಾರೇತರ ಸಂಸ್ಥೆ ಗಳನ್ನು ಕೂಡ ಬಳಸಿಕೊಂಡು ಪರಿಣಾಮಕಾರಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು” ಕರೆ ನೀಡಿದರು.

ಎಸ್. ಜಿ. ಖುದ್ದುನ್ನವರ, ಎಸ್. ಬಿ. ಪಾಟೀಲ, ಎಸ್. ಬಿ. ಬೆಟ್ಟದ,ಚಿದಾನಂದ ಬಾರ್ಕಿ, ಬಿ.ಡಿ.ಕಲಬಾವಿ, ಆರ್.ಎನ್.ಇಂಗಳಗಿ, ಎಸ್.ಎಂ.ಬಡಿಗೇರ, ಆರ್.ಎಸ್.ಕುಲಕರ್ಣಿ, ಪ್ರಕಾಶ ನಾಯ್ಕರ, ಅರ್ಚನಾ ಕುಲಕರ್ಣಿ, ಡಿ. ಎಚ್. ಪಾಟೀಲ, ಅಂಜಲಿ ಕವಿಲ್ಕರ, ಆರತಿ ಕಲಘಟಕರ, ಸಂಗನಬಸವ ಮುಧೋಳ, ಅರುಣಾ ಕೋಳಿ, ಬಸವರಾಜ ಪಟ್ಟಣಶೆಟ್ಟಿ, ಗಾಯತ್ರಿ ಕಮ್ಮಾರ, ಆದರ್ಶಾ ಘೋಡಗೇರಿ, ಮಲ್ಲಪ್ಪ ಯಂಕಂಚಿ, ರೇಣುಕಾ ಮಡಿವಾಳರ, ರಾಮಕೃಷ್ಣ ಹುಲಜಿ,ದುಗ್ಗಪ್ಪ ಭಜಂತ್ರಿ,ವ್ಹಿ. ಎಸ್. ಕಿನಗಿ, ಬಿ.ಎಸ್.ತಳವಾರ,ಎಸ್.ಎ.ಕೆಂಚನಟ್ಟಿ, ವಾಯ್.ಬಿ.ಪಾಟೀಲ, ಟಿ.ಯು.ಈರಗಾರ, ಎಸ್.ವ್ಹಿ.ಸುನಗ ಮೊದಲಾದ ವಿಕಲಚೇತನ ಮಕ್ಕಳ ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಹಾಜರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಆರ್. ಎಸ್. ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು. ಎಸ್. ಕೆ. ಕಮ್ಮಾರ ಸ್ವಾಗತಿಸಿದರು. ವೈ. ಬಿ. ಕಡಕೋಳ ನಿರೂಪಿಸಿದರು. ಶಿವಾನಂದ ಹುಲಗಬಾಳ ವಂದಿಸಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group