ಬೀದರ -ಒಂದೇ ಕುಟುಂಬದ ಐವರಿಗೆ ಕೊರೋನಾ

Must Read

ಬೀದರ – ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ ಜಿಲ್ಲೆಯ ಹುಲಸೂರು ತಾಲ್ಲೂಕಿನ ನಲ್ಲಿ ಒಂದೇ ಕುಟುಂಬದ ಐವರಿಗೆ ಕರೋನ ವೈರಸ್ ಪಾಸಿಟಿವ್ ಪ್ರಕರಣ ಸುದ್ದಿ ಆಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಒಂದು ಓಣಿಯನ್ನೇ ಸಿಲ್ ಡೌನ್ ಮಾಡಿದೆ.

ಮಹಾರಾಷ್ಟ್ರದ ಗಡಿ ಬೀದರ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಒಂದೆ ಕುಟುಂಬದ ಐದು ಜನರಿಗೆ ಕೋವೀಡ್ ಪಾಸಿಟಿವ್ ಬಂದಿರುವುದನ್ನು ಕಂಡು ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಅವರ ಮನೆ ಹಾಗೂ ಅವರ ಸುತ್ತಮುತಲಿನ ಮನೆಯವರ ಮತ್ತು ಆ ಓಣಿಯ 30 ಜನರ ಸ್ಲ್ಯಾಬ್ ಸ್ಯಾಂಪಲ್ ತೆಗೆದುಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ ಕರೋನಾ ಟೆಸ್ಟ್ ಗೆ ಕಳುಹಿಸಿದರು.

ಮುನ್ನೆಚರಿಕೆ ಕ್ರಮವಾಗಿ ನಿನ್ನೆ ಮಧ್ಯಾಹ್ನ ದ ಹೊತ್ತಿಗೆ ಓಣಿಯನ್ನು ಜಿಲ್ಲಾಡಳಿತ ದಿಂದ ಸೀಲ್ ಡೌನ್ ಮಾಡಲಾಗಿದೆ ಎಂದು ಹುಲಸೂರ ತಹಶೀಲ್ದಾರ ಶಿವಾನಂದ ಮೇತ್ರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು,ಪಿ.ಎಸ್.ಐ ಗೌತಮ ಗುತ್ತೆದಾರ,ಕಂದಾಯ ಅಧಿಕಾರಿಗಳಾದ ಮೌನೇಶ್ವರ ಸ್ವಾಮಿ, ನಾಗರಾಜ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group