ಬೀದರ: ನಾಮ್ ಕೆ ವಾಸ್ತೆ ಕರ್ಫ್ಯೂ…

Must Read

ಬೀದರ – ಕಲ್ಯಾಣ ಕರ್ನಾಟಕದ ಗಡಿನಾಡು ಬೀದರ್ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ ಎನ್ನುವಂತಿದೆ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿದ್ದರೂ ಎಂದಿನಂತೆ ಜನ ಸಂಚಾರ ಮಾತ್ರ ಇದೆ.

ಪೊಲೀಸರು ನಗರದ ಪ್ರಮುಖ ರಸ್ತೆಗಳಿಗೆ ಬ್ಯಾರಿಗೇಡ್ ಅಳವಡಿಸಿದ್ದು, ಮಾಸ್ಕ್ ಧರಿಸದೆ ಜನರ ಓಡಾಟ ನಿರಂತರವಾಗಿದೆ. ಬೀದರ್ ನಲ್ಲಿ ವೀಕೆಂಡ್ ಕರ್ಫ್ಯೂ ಗೆ ಸಿಗದ ಸಾರ್ವಜನಿಕರಿಂದ ರೆಸ್ಪಾನ್ಸ್ ಕೋವಿಡ್ ರೂಲ್ಸ್‌ಗೆ ಡೊಂಟ್ ಕೇರ್ ಅಂದ ಜನರು ಬೆಳ್ಳಂಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಮನೆಯಿಂದ ಹೊರ ಬರುತ್ತಿರುವ ಜನ, ಮಾಸ್ಕ್ ಧರಿಸದೆ ಬೈಕ್ ಮೇಲೆ ಸುತ್ತಾಟ ಮಾಡ್ತಿರೋ ಜನ ಕಂಡುಬಂದಿತು.

ಪ್ರಮುಖ ವೃತ್ತಗಳಲ್ಲಿ ಮಾತ್ರ ಪೊಲೀಸರು ಕಣ್ಗಾವಲು ಹಾಕಿದ್ದು ಕಂಡು ಬಂದಿತು.

ಶಾಸಕರ ನೃತ್ಯ; ಬೀದರ್ ಬ್ರೇಕಿಂಗ್

ಇತ್ತ ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಎಲ್ಲ ಮರೆತು ನೃತ್ಯ ಕಾರ್ಯಕ್ರಮ ದಲ್ಲಿ ತೊಡಗಿಕೊಂಡರು. ಹಿಂದಿಯ ಮುಕ್ಕಾಲಾ ಮುಕಾಬುಲಾ… ಹಾಡಿನಲ್ಲಿ ಸಕತ್ ಡ್ಯಾನ್ಸ್ ಮಾಡಿದ ಶಾಸಕರ ವಿಡಿಯೋ ಇವಾಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದೆ.

ನಿನ್ನೆ ರಾತ್ರಿ ಬಸವಕಲ್ಯಾಣ ನಗರದಲ್ಲಿ ನೂತನವಾದ DANCE CRAZY ಅಕಾಡೆಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕರು ಜೊತೆಗೆ ಕಾರ್ಯಕ್ರಮದಲ್ಲಿ ಸೇರಿದ್ದ ನೃತ್ಯಗಾರರೊಂದಿಗೆ ನೃತ್ಯ ಮಾಡಿದರು.

ಕೊರೋನಾ ಸಂಕಷ್ಟದಲ್ಲಿಯೂ ಕೂಡ ಶಾಸಕರು ನೃತ್ಯದಲ್ಲಿ ತೊಡಗಿದ್ದು ಟೀಕೆಗಳಿಗೆ ತುತ್ತಾಗಿದ್ದು ಬಸವಕಲ್ಯಾಣ ಅಭಿವೃದ್ಧಿ ಕಡೆ ಶಾಸಕರು ಗಮನ ಹರಿಸಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group