ಒಪ್ಪಿಕೊ ಕೃಷ್ಣ
ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ
ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ ಕೃಷ್ಣ.
ರಾಧಾ ಶಾಮರಾವ