✨️🌼ಏಕಾದಶಿಯ ಫಲದ ಕಥೆ 🌼✨️

Must Read

🌿 ತಮ್ಮಯ್ಯ ಎಂಬುವನು ಹೊಸದಾಗಿ ಮದುವೆಯಾಗಿದ್ದನು. ಹೊಸ ಬಟ್ಟೆ ಹಾಕಿಕೊಂಡು ಮಾವನ ಮನೆಗೆ ಹೊರಟಿದ್ದ. ಹಬ್ಬ ಮುಗಿಸಿ ಹೆಂಡತಿಯನ್ನು ಕರೆದುಕೊಂಡು ಬರಲು ಹೊರಟಿದ್ದನು. ಅವನು ಹೋಗುವ ಹಾದಿಯಲ್ಲಿ ಒಂದು ಹಸು ನೀರು ಕುಡಿಯಲು ಹಳ್ಳದ ಹತ್ತಿರ ಬರುತ್ತಿತ್ತು. ಅದನ್ನು ಇವನು ನೋಡಿದ. ಹಸು ಹಳ್ಳದಲ್ಲಿ ಇಳಿದು ನೀರು ಕುಡಿಯಲು ಹೋದಾಗ ಅದರ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಏನು ಮಾಡಿದರು ಅದಕ್ಕೆ ಕಾಲನ್ನು ಕೆಸರಿನಿಂದ ಎಳೆದುಕೊಳ್ಳಲು ಆಗಲಿಲ್ಲ. ಮಾವನ ಮನೆಗೆ ಹೋಗುತ್ತಿದ್ದ ತಮ್ಮಯ್ಯನನ್ನು ಹಸುವು ನೋಡಿತು.

🌿 ಸಹಾಯಕ್ಕೆ ಕರೆಯಿತು. ಆದರೆ ತಮ್ಮಯ್ಯನು ಇಲ್ಲ ನಾನು ನಿನಗೆ ಸಹಾಯ ಮಾಡಲಾರೆ ಹೊಸ ಬಟ್ಟೆ ಹಾಕಿಕೊಂಡು ಮಾವನ ಮನೆಗೆ ಹೊರಟಿದ್ದೇನೆ. ನಿನಗೆ ಸಹಾಯ ಮಾಡಲು ಬಂದರೆ ನನ್ನ ಬಟ್ಟೆ ಕೆಸರಾಗುತ್ತದೆ ಆದುದರಿಂದ ನಾನು ಬರುವುದಿಲ್ಲ ಎಂದನು. ಹಸು ಒಂದೆರಡು ಸಲ ದಯನೀಯವಾಗಿ ಸಹಾಯ ಮಾಡಲು ಕೇಳಿತು. ಆದರೆ ಅವನು ಒಪ್ಪಲಿಲ್ಲ. ಅಷ್ಟು ಹೊತ್ತಿಗೆ ಹಸು ಇನ್ನೇನು ಕೆಸರಿನಲ್ಲಿ ಮುಳುಗುವುದುರಲ್ಲಿತ್ತು. ಅದು ಸಿಟ್ಟಿನಿಂದ ತಮ್ಮಯ್ಯನಿಗೆ, ನೀನು ನನಗೆ ಸಹಾಯ ಮಾಡದಿದ್ದ ಕಾರಣ ಇನ್ನು ಕೆಲವೇ ಗಂಟೆಗಳಲ್ಲಿ ಕತ್ತೆಯಾಗುತ್ತಿ ಎಂದು ಶಾಪ ಕೊಟ್ಟಿತು. ಆಗ ಇವನಿಗೆ ತುಂಬಾ ಹೆದರಿಕೆಯಾಯಿತು. ಕ್ಷಮಿಸು ಎಂದು ಹಸುವನ್ನು ಕೇಳಿದ. ಅಷ್ಟರೊಳಗೆ ಹಸುವು ಮುಳುಗಿಬಿಟ್ಟಿತು.

🌿 ತಮ್ಮಯ್ಯನಿಗೆ ಈಗ ಬಹಳ ಹೆದರಿಕೆ ಯಾಯಿತು. ಹೆದರಿಕೊಂಡೇ ಮಾವನ ಮನೆಗೆ ಹೋಗಿ ಹೆಂಡತಿಯನ್ನು ಕೂಡಲೇ ನನ್ನೊಂದಿಗೆ ಹೊರಡು ಎಂದನು. ಆಗ ಪತ್ನಿಯು ಯಾಕೆ ಅವಸರ ಮಧ್ಯಾಹ್ನದ ಮೇಲೆ ಹೋದರಾಯಿತು ಎಂದಳು. ಆತನು ಪತ್ನಿಯನ್ನು ಸನ್ನೆಮಾಡಿ ದೂರ ಕರೆದು ಗುಟ್ಟಾಗಿ ಎಲ್ಲವನ್ನೂ ಹೇಳಿ ಕೆಲವೇ ಗಂಟೆಗಳಲ್ಲಿ ನಾನು ಕತ್ತೆ ಆಗುತ್ತೇನೆಂದು ಶಾಪದ ವಿಷಯವನ್ನು ಹೇಳಿದ. ಇದನ್ನೆಲ್ಲಾ ಕೇಳಿದ ಆತನ ಪತ್ನಿಯು, ಅವಳ ತಂದೆ-ತಾಯಿ ಅಳಿಯನಿಗೆ ಎರಡು ದಿನ ಇದ್ದು ಹೋಗಿ ಎಂದರೂ, ಆತನ ಪತ್ನಿ ಮುಂದೆ ಬಂದು, ಇಲ್ಲ ನಾವು ಹೋಗಲೇಬೇಕು ಎಂದು ಯಾವುದೋ ನೆಪ ಹೇಳಿ ಗಂಡ – ಹೆಂಡತಿ ಮಾವನ ಮನೆಯಿಂದ ಹೊರಟೇ ಬಿಟ್ಟರು.

🌿 ಹೊರಟು ಊರು ತಲುಪಿದರು. ಕೆಲವೇ ಸಮಯದಲ್ಲಿ ಆತನು ಕತ್ತೆಯಾಗಿ ಪರಿವರ್ತನೆ ಹೊಂದಿದನು. ಆಮೇಲೆ ಕತ್ತೆಯಾಗಿ ಮನೆಯಲ್ಲಿ ಇರತೊಡಗಿದ. ಸ್ವಲ್ಪ ದಿನಗಳಲ್ಲಿ ಮನೆಯಲ್ಲಿದ್ದ ಸಾಮಾನುಗಳೆಲ್ಲ ಮುಗಿದುಹೋಯಿತು. ಆಗ ಕತ್ತೆಯಾದ ಅವನು ಮನುಷ್ಯರಂತೆ ಮಾತನಾಡಿ, ನೋಡು ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಏನಾದರೂ ಕೆಲಸ ಹುಡುಕು ಎಂದನು. ಅವನು ಹೇಳಿದಂತೆ ಆಕೆ ಕತ್ತೆಯಾದ ಗಂಡನನ್ನು ಕರೆದುಕೊಂಡು ಹೊರಗೆ ಹೊರಟಳು.

🌿 ಊರಿನ ರಾಜನ ಅರಮನೆಯಲ್ಲಿ ಕೂಲಿ ಕೆಲಸಕ್ಕೆ ಹೋದಳು. ಅಲ್ಲಿ ಕೂಲಿ ಕೆಲಸ ಮಾಡುವಾಗ ಕಸದ ಚೀಲವನ್ನು ಅವಳೇ ಹೊತ್ತುಕೊಂಡು ಹೋಗುವುದನ್ನು ನೋಡಿದ ಜನರು ನಿನ್ನ ಹತ್ತಿರ ಕತ್ತೆ ಇದೆ ಅದರ ಮೇಲೆ ಕಸದ ಚೀಲಹೋರಿಸು ಎಂದರು. ಆದರೆ ಅವಳು ಅವರಿಗೆ ಯಾವ ಉತ್ತರವನ್ನು ಕೊಡದೆ ತನ್ನ ಕೆಲಸ ಮುಂದುವರೆಸಿದಳು. ದೂರದಿಂದ ಇದನ್ನು ಗಮನಿಸುತ್ತಿದ್ದ ರಾಜನು ಅವಳನ್ನು ಕರೆದು, ಅವನು ಸಹ ಆಕೆಗೆ ಇದೇ ಪ್ರಶ್ನೆ ಕೇಳಿದಾಗ, ಅವಳು ಇದು ಕತ್ತೆಯಲ್ಲ ಮಹಾರಾಜ, ನನ್ನ ಪತಿ. ಎಂದು ಹಸುವಿನಿಂದ ಬಂದ ಶಾಪದ ವಿಷಯವನ್ನು ರಾಜನಿಗೆ ಹೇಳಿದಳು.

🌿 ರಾಜನು ರಾಜ್ಯದಲ್ಲಿದ್ದ ವಿದ್ವಾಂಸರನ್ನು ,ಪಂಡಿತರನ್ನು ಕರೆದು ಇದಕ್ಕೆ ಪರಿಹಾರೋಪಾಯ ಏನೆಂದು ಕೇಳಿದನು. ಆಗ ಒಬ್ಬ ವಿದ್ವಾಂಸ ಹೇಳಿದನು ಯಾರು ‘ನಿರ್ಜಲ ಏಕಾದಶಿ’ ವ್ರತವನ್ನು ಮಾಡಿರುತ್ತಾರೋ, ಅವರ ಪುಣ್ಯವನ್ನು ಆತನಿಗೆ ಕೊಟ್ಟರೆ ಶಾಪ ಪರಿಹಾರವಾಗಿ ನಿಜರೂಪ ಬರುತ್ತದೆ ಎಂದರು. ಈ ಏಕಾದಶಿ ವ್ರತ ಹೇಗೆಂದರೆ 11 ಏಕಾದಶಿ ವ್ರತ ಮಾಡಿದರೆ ಅದು ಒಂದು ಏಕಾದಶಿಗೆ ಸಮವಾಗುತ್ತದೆ. 22 ಏಕಾದಶಿ ಮಾಡಿದರೆ ಅದು ಎರಡು ಏಕಾದಶಿಗೆ ಸಮವಾಗುತ್ತದೆ. ಈ ರೀತಿ 101 ಏಕಾದಶಿ ಅಂದರೆ 11 ಏಕಾದಶಿ ಒಂದು ಏಕಾದಶಿಯಂತೆ 101 ಏಕಾದಶಿ ವ್ರತ ಮಾಡಿರಬೇಕು. ಅಂಥವರು ಆ ಪುಣ್ಯವನ್ನು ಇವನಿಗೆ ಧಾರೆಯೆರೆದರೆ ಅವನು ನಿಜರೂಪಕ್ಕೆ ಬರುತ್ತಾನೆ ಎಂದರು.

🌿 ಆಗ ರಾಜನು ಇಂಥ ಏಕಾದಶಿ ವ್ರತವನ್ನು ಯಾರು ಮಾಡಿದ್ದಾರೆ ಎಂದು ತಿಳಿಯಲು ಘೋಷಣೆ ಮಾಡಿಸಿದನು. ಆದರೆ ಯಾರೂ ಮಾಡಿರಲಿಲ್ಲ. ಕೆಲವು ದಿನಗಳ ನಂತರ ಒಬ್ಬ ಮಹಿಳೆ ಬಂದು ತಾನು ಅಂತ ಏಕಾದಶಿ ವ್ರಥವನ್ನು ಮಾಡಿದ್ದೇನೆ ಆದರೆ 100 ಏಕಾದಶಿ ವ್ರತದ ಪುಣ್ಯ ಆತನಿಗೆ ಕೊಡುತ್ತೇನೆ ಒಂದು ಏಕಾದಶಿ ವ್ರತವನ್ನು ತನ್ನ ಮೋಕ್ಷಕ್ಕಾಗಿ ಇಟ್ಟುಕೊಳ್ಳುತ್ತೇನೆ ಎಂದಳು. ಆ ಪುಣ್ಯದಿಂದ ತಾನು ವೈಕುಂಠದಲ್ಲಿ ವಾಸ ಮಾಡಬಹುದು ಆದುದರಿಂದ ನಾನು 100 ಏಕಾದಶಿ ಪುಣ್ಯವನ್ನು ಮಾತ್ರ ಕೊಡುತ್ತೇನೆ ಎಂದಳು. ಆ ಪ್ರಕಾರ ಆ ಮಹಿಳೆಯು ಆತನಿಗೆ 100 ಏಕಾದಶಿ ವ್ರತದ ಪುಣ್ಯವನ್ನು ಧಾರೆ ಎರೆಯುತ್ತಿದ್ದಂತೆ ಅವನ ಕತ್ತೆ ಶಾಪ ಹೋಗಿ ಮನುಷ್ಯರೂಪ ತಾಳಿದನು ಆದರೆ ಇನ್ನೊಂದು ಏಕಾದಶಿ ಕೊರತೆಯಿದ್ದ ಕಾರಣ ಕತ್ತೆಯ ಬಾಲ ಅವನಲ್ಲೇ ಉಳಿಯಿತು.

🌿 ಆಮೇಲೆ ಗಂಡ – ಹೆಂಡತಿ ಇಬ್ಬರು ಸೇರಿ ಭಕ್ತಿಯಿಂದ ಒಂದು ಏಕಾದಶಿ ಅಂದರೆ 11 ಏಕಾದಶಿ ವ್ರತವನ್ನು ಶ್ರದ್ಧೆಯಿಂದ ಆಚರಿಸಿದರು. ಹಸು ಕೊಟ್ಟ ಶಾಪದಿಂದ ವಿಮೋಚನೆ ಸಿಕ್ಕಿತು. ಅವನಲ್ಲಿ ಉಳಿದಿದ್ದ ಕತ್ತೆ ಬಾಲವು ಹೋಯಿತು. ಎಂಥ ಘೋರ ಶಾಪಗಳು ಸಹ ದೇವರ ಪೂಜೆ ವ್ರತ ಕಥೆಗಳಿಂದ ಕರಗಿಹೋಗುತ್ತದೆ. ದೇವರನ್ನು ನಂಬಿದವರಿಗೆ ಅವನ ಕೃಪೆ ಇದ್ದೇ ಇರುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...

More Articles Like This

error: Content is protected !!
Join WhatsApp Group