‘ತನ್ಮಯ ಪ್ರಕಾಶನ’ ಬೆಳಗಾವಿ ಅವರಿಂದ ‘ಚಿಂತನ ಚಾವಡಿ ಗೋಷ್ಠಿ’

Must Read

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ಸೇರಿಕೊಂಡು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹತ್ತು ಹಲವು ವೈವಿಧ್ಯಮಯ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವಿಚಾರಗೋಷ್ಠಿ, ಪುಸ್ತಕ ವಿಮರ್ಶೆ, ವ್ಯಕ್ತಿ ಅಧ್ಯಯನ, ಐತಿಹಾಸಿಕ ಘಟನೆಗಳ ಮೆಲುಕು, ಇತಿಹಾಸದಲ್ಲಿ ಮರೆತುಹೋದ ಮಹಾನ್ ಸಾಧಕರ ಕುರಿತು ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಚಿಂತನ ಗೋಷ್ಠಿಯ ಅಡಿಯಲ್ಲಿ ಶುಕ್ರವಾರ ದಿ.21 ರಂದು ಸಂಜೆ 4.30 ಗಂಟೆಗೆ ನಿವೃತ್ತ ಶಿಕ್ಷಕರು ಸಾಹಿತಿಗಳು ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಎಂ. ವೈ.ಮೆಣಸಿನಕಾಯಿ ಅವರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಪುಸ್ತಕದ ಪರಿಚಯ ಖಾನಾಪುರ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಚಂದ್ರಶೇಖರ ತಾಂಬೋಜಿ ರವರಿಂದ ನಡೆಯಲಿದೆ, ಮತ್ತು ನ್ಯಾಯವಾದಿ ಮತ್ತು ಸಾಹಿತಿಗಳಾದ ಸುನೀಲ್ ಸಾಣಿಕೊಪ್ಪ ರವರು ಬರೆದ ‘ಬಯಲುಗೀತ’ ಕವನ ಸಂಕಲನದ ಪರಿಚಯವನ್ನು ಶಿಕ್ಷಕರು ಸಾಹಿತಿಗಳು ಬೆಳಗಾವಿ ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಶಿವಾನಂದ ತಲ್ಲೂರ ರವರು ನಡೆಸಿಕೊಡಲಿದ್ದಾರೆ . ಸದರಿ ಕಾರ್ಯಕ್ರಮವು ಎಸ್. ಎನ್. ಮುತಾಲಿಕ್ ದೇಸಾಯಿ #ನಂ.6681′ ಪ್ರಾಣೇಶ್ ‘ಸೆಕ್ಟರ್ ನಂಬರ್ 10 ನಂದಿನಿ ಮಾರ್ಗ ನಂದಿನಿ ಡೈರಿ ಹತ್ತಿರ ಆಂಜನೇಯ ನಗರ ಬೆಳಗಾವಿಯಲ್ಲಿ ನಡೆಯಲಿದೆ.

ಸಾಹಿತಿಗಳು, ಚಿಂತಕರು,ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಸ. ರಾ. ಸುಳಕೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ ಎಂ.ವೈ.ಮೆಣಸಿನಕಾಯಿ. M:9449209570.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group