ಬ್ರಹ್ಮಶಿವ, ತಾತ್ವಿಕ ನೆಲೆಯ ಭಿನ್ನ ಕವಿ; ಡಾ. ಚಿತ್ತಯ್ಯ ಪೂಜಾರ

Must Read

ಬೆಳಗಾವಿ, ಜ 19: ಕನ್ನಡ ವಿಡಂಬನ ಕವಿ ಎಂದು ಖ್ಯಾತಿ ಪಡೆದ ಬ್ರಹ್ಮಶಿವ ತನ್ನ ತಾತ್ವಿಕ ನೆಲೆಯ ಭಿನ್ನ ವಿಚಾರಗಳಿಂದ ಧಾರ್ಮಿಕ ಚಿಂತನೆಗಳನ್ನು ತನ್ನ ಕೃತಿಯಾದ ಸಮಯ ಪರೀಕ್ಷೆಯಲ್ಲಿ ಪ್ರತಿಪಾದಿಸಿದ್ದಾನೆ. ಪರ ಧರ್ಮದ ವಿಚಾರಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾ ಅದಕ್ಕೆ ತಕ್ಕ ಉಪಮೇಯಗಳನ್ನು ನಿರೂಪಿಸುತ್ತಾನೆ. ಧಾರ್ಮಿಕ ಚಿಂತನೆಗಳನ್ನು ತನ್ನ ವಿಚಾರಗಳಿಂದ ಒರೆಗೆ ಹಚ್ಚುವ ಕಾರ್ಯ ಮಾಡಿದ್ದಾನೆ. ಕನ್ನಡದ ಬಂಡಾಯ ನೆಲೆಯನ್ನು ಈತನಲ್ಲಿ ಕಾಣಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಬ್ರಹ್ಮಶಿವನ ಸಮಯ ಪರೀಕ್ಷೆ ಸ್ವರೂಪ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಚಿತ್ತಯ್ಯ ಪೂಜಾರ ಇವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಮ್. ಗಂಗಾಧರಯ್ಯ ಅವರು ಮಾತನಾಡಿ ಬ್ರಹ್ಮಶಿವನ ಮರು ಓದು ಕಾರ್ಯವಾಗಬೇಕು ಬ್ರಹ್ಮ ಶಿವನ ವಿಚಾರ ಕತೃತ್ವ ಹೊಸ ವಿಚಾರಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಗಜಾನನ ನಾಯ್ಕ, ಡಾ. ಮಹೇಶ್ ಗಾಜಪ್ಪನವರ, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ, ಎಂ.ಎ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group