ಸಿಂದಗಿ- ಅವಿಶ್ವಾಸ ಮಂಡನೆಗೆ ಸೋಲು; ಸಂಭ್ರಮಿಸಿದ ಅಧ್ಯಕ್ಷ ಉಪಾಧ್ಯಕ್ಷರು

Must Read

ಸಿಂದಗಿ: ಅಧಿಕಾರ ವಹಿಸಿಕೊಂಡಾಗಿನಿಂದಲೂ ಯಾವುದೇ ಅಭಿವೃಧ್ದಿ ಸಲುವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಲು ವಿಫಲರಾಗಿದ್ದಾರೆ ಅದಕ್ಕೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಕೆಲ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ಸಭೆ ಕರೆಯಲಾಗಿತ್ತು ಆದರೆ 8 ಸದಸ್ಯರ ಕೋರಮ್ ಆಗಿದ್ದರಿಂದ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ವಿಫಲವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಪರವಾಗಿ ಗೊತ್ತುವಳಿ ಮಂಡನೆಯಾಗಿ ಸುಸೂತ್ರವಾಗಿ ಸಭೆ ನಡೆದಿದ್ದು ಅವಿಶ್ವಾಸ ಪರ ನಿಂತ ಸದಸ್ಯರಿಗೆ ಮುಖಭಂಗವಾಯಿತು.

ಪಟ್ಟಣದ 23 ವಾರ್ಡುಗಳ ಸದಸ್ಯರಲ್ಲಿ ಕಳೆದ ಸಭೆಯಲ್ಲಿ 16 ಜನ ಅವಿಶ್ವಾಸಕ್ಕೆ ಸಹಿ ಹಾಕಿ ಗುಪ್ತ ಮತದಾನವಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು ಅದು ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಉಪಾಧ್ಯಕ್ಷ ಹಾಸೀಂ ಆಳಂದ ಪರವಾಗಿ ನಿರ್ಣಯ ಹೊರಬಿದ್ದಿತ್ತು ನಂತರ ಕರೆದ ಅವಿಶ್ವಾಸ ಸಭೆಗೆ ಅಧ್ಯಕ್ಷ ಡಾ ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸೀಂ ಆಳಂದ ಸೇರಿ ಶಾಂತವೀರ ಬಿರಾದಾರ, ಪಾರ್ವತಿ ದುರ್ಗಿ, ಶ್ರೀಶೈಲ ಬೀರಗೊಂಡ, ಪ್ರತಿಭಾ ಕಲ್ಲೂರ, ತಹಸೀಂಬಿ ಮುಲ್ಲಾ, ಭೀಮು ಕಲಾಲ ಸೇರಿ 8 ಜನ ಸದಸ್ಯರು ಸಭೆಗೆ ಹಾಜರಾಗಿ ಸಭೆ ನಡೆಸಿದರೆ 11 ಜನ ಸದಸ್ಯರು ಪುರಸಭೆಗೆ ಕಾರ್ಯಾಲಯದ ಆವರಣದಲ್ಲಿದ್ದು ಸಭೆಗೆ ಹಾಜರಾಗದೇ ಇದ್ದರೆ ಇನ್ನುಳಿದ 4 ಜನ ಸದಸ್ಯರು ಗೈರು ಹಾಜರಾಗಿದ್ದರೂ ಕೂಡ 1964 ಕಾಯ್ದೆ 42(9) ಅನ್ವಯ ಇದ್ದ ಸದಸ್ಯರ ಪೈಕಿ 2/3 ಸದಸ್ಯರು ಹಾಜರಿ ಇದ್ದು ಕೊಇರಂ ಭರ್ತಿ ಇರುವುದು ಸಭೆ ನಡೆಸಬಹುದು ಎನ್ನುವ ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸಭೆ ನಡೆಸಿ ಅಭಿವೃದ್ಧಿಪರ ಚರ್ಚೆಗಳು ನಡೆದು ಠರಾವು ಪಾಸ್ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ತಿಳಿಸಿದರು.

ಬಿಗಿ ಬಂದೋಬಸ್ತ್ ನಲ್ಲಿ ಸಭೆ:

24ರಂದು ನಡೆದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಪಿಐ ರವಿ ಉಕ್ಕುಂದ, ಸಿಂದಗಿ ಪಿಎಸೈ ನಿಂಗಪ್ಪ ಪೂಜಾರಿ, ದೇವರಹಿಪ್ಪರಗಿ ಪಿಎಸ್‍ಐ ರವಿ ಯಡವಣ್ಣನವರ, ಕಲಕೇರಿ ಪಿಎಸ್‍ಐ ಜಿ.ಜಿ.ಬಿರಾದಾರ, ಅಲಮೇಲ ಪಿಎಸ್‍ಐ ಸುರೇಶ ಗಡ್ಡಿ ಸೇರಿದಂತೆ ಪೊಲೀಸ ಸಿಬ್ಬಂದಿ ಪುರಸಭೆಯ ಹೊರಗೆ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ವಿಜಯೋತ್ಸವ:

ಅಧ್ಯಕ್ಷ-ಉಪಾಧ್ಯಕ್ಷರ ಪರವಾಗಿ ಗೊತ್ತುವಳಿ ಮಂಡನೆಯಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿ ಟಿಪ್ಪು ಸರ್ಕಲ್, ಅಂಬೇಡ್ಕರ ವೃತ್ತಕ್ಕೆ ಮಾಲಾರ್ಪಣೆ ಸಲ್ಲಿಸಿ ನಂತರ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಗದ್ದುಗೆಗೆ ಹೂಮಾಲೆ ಹಾಕಿ ಹರ್ಷ ವ್ಯಕ್ತಪಡಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group