ಮಕ್ಕಳಿಗೆ ಶಿಸ್ತು ಕಲಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪಾತ್ರ ಮುಖ್ಯವಾದದ್ದು – ರಾಜಶೇಖರ ಖೇಡಗಿ

Must Read

ಸಿಂದಗಿ– ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸನ್ನಡತೆ, ಸದ್ಭಾವನೆ, ಶಿಸ್ತು, ಮತ್ತು ಸೇವಾ ಮನೋಭಾವನೆಗಳಂತಹ ಶಿಕ್ಷಣವನ್ನು ನೀಡಿ ಭಾರತದ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ ಎಂದು ವಿಜಯಪುರದ ಬಿ.ಜಿ.ಎಸ್ ನ ಜಿಲ್ಲಾ ಸಂಘಟಿಕ ರಾಜಶೇಖರ ಖೇಡಗಿ ಹೇಳಿದರು.

ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ನ ದಿ.ಎಮ್.ಸಿ.ಮನಗೂಳಿ ರೋವರ್ ಘಟಕ ಹಾಗೂ ತಾಯಿ ಈರವ್ವ ನಮದಿ ರೇಂಜರ್ ಘಟಕದ ಉದ್ಘಾಟನಾ ಸಮಾರಂಭ ಹಾಗೂ ದೀಕ್ಷಾ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ನೀಡಿದರೆ ಮಕ್ಕಳ ಬದುಕು ಪರಿಪೂರ್ಣವಾಗುವದಿಲ್ಲ ಜೊತೆಗೆ ಸಾಮಾಜಿಕ ಬದುಕಿನ ಎಲ್ಲ ಮಾರ್ಗಗಳನ್ನು ಮಕ್ಕಳಲ್ಲಿ ಬೆಳೆಸುವುದು ಇಂದು ಅನಿವಾರ್ಯವಾಗಿದೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಕುಂಬಾರ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಸೇವೆ ಒಂದು ದೇಶ ಸೇವೆ. ಇದರಿಂದ ನಮ್ಮ ದೇಹ ಸದೃಢ ಮತ್ತು ಮಾನಸಿಕವಾಗಿ ಪ್ರಬಲರಾಗುತ್ತೇವೆ. ವಿದ್ಯಾರ್ಥಿಗಳಲ್ಲಿ ಸುಸಂಸ್ಕೃತ ನಾಗರಿಕತ್ವ ಬೆಳೆದು ಬರುತ್ತದೆ. ಇಂತಹ ಶಿಸ್ತಿನ ಶಿಕ್ಷಣ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಮುಖ್ಯವಾಗಿವೆ.ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಶಿಸ್ತಿನ ತರಬೇತಿ ಪಡೆದು ಭಾರತದ ಆಸ್ತಿಯಾಗಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳನ್ನು ಸ್ಥಾಪಿಸಬೇಕು ಇದರಿಂದ ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಮುಂಚೆ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳಿಗೆ ದೀಕ್ಷೆಯನ್ನು ನೀಡಿ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜಾರೋಹಣ ನೆರವೇರಿಸಲಾಯಿತು.

ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಂದಗಿಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಬಸವರಾಜ ಸೋಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ರೋವರ್ ಸ್ಕೌಟ್ಸ್ ಲೀಡರ್ ಎಸ್.ಪಿ.ಬಿರಾದಾರ, ರೇಂಜರ್ ಲೀಡರ್ ಎ.ಆರ್.ಸಿಂದಗಿಕರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಆರ್.ಬಿ.ಹೊಸಮನಿ, ಆರ್.ಸಿ.ಕಕ್ಕಳಮೇಲಿ, ಎಮ್.ಎಸ್.ಕಿರಣಗಿ, ಸತೀಶ ಪಾಟೀಲ, ಎಮ್.ಎನ್.ಅಜ್ಜಪ್ಪ, ಸಿದ್ದಲಿಂಗ ಕಿಣಗಿ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಸತೀಶ ಬಸರಕೊಡ, ಡಾ. ಶಾಂತುಲಾಲ ಚವ್ಹಾಣ, ಎ.ಬಿ.ಪಾಟೀಲ, ಆರ್.ವ್ಹಾ.ಪರೀಟ, ಸುರೇಶ ಮಂಗೋಂಡಿ, ಎನ್.ಆರ್.ಕುಲಕರ್ಣಿ, ರವಿ ಉಪ್ಪಾರ, ವಿಶಾಲ ಮಠ ಸೇರಿದಂತೆ ಅನೇಕರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group