ಕವನ: ಕಾಡಿನಲ್ಲಿ ಬಾಳುವಾಸೆ ನನ್ನದು

Must Read

ಕಾಡಿನಲ್ಲಿ ಬಾಳುವಾಸೆ ನನ್ನದು

ದಟ್ಟವಾದ ಕಾಡಿನಲ್ಲಿ
ಪುಟ್ಟದಾದ ಮನೆಯ ಕಟ್ಟಿ
ಚಂದದಿಂದ ಬಾಳಬೇಕು
ಎನುವ ಆಸೆ ನನ್ನದು.

ಗಡ್ಡೆ-ಗೆಣಸು, ಜೊತೆಗೆ ಜೇನು
ಹಣ್ಣು ಹಂಪಲವನ್ನು ಸವಿದು
ಹರಿವ ತೊರೆಯ ತಿಳಿಯನೀರು ಕುಡಿವ ಆಸೆ ನನ್ನದು.

ಪ್ರಾಣಿ-ಪಕ್ಷಿ ಜೊತೆಗೆ ಕೂಡಿ
ಸ್ನೇಹ ,ಪ್ರೀತಿ, ಮಮತೆ ತೋರಿ
ಬೆರೆತು ಕೂಡಿ ಆಡಬೇಕು
ಎಂಬ ಆಸೆ ನನ್ನದು.

ಹಚ್ಚಹಸಿರ, ಸ್ವಚ್ಛ ಉಸಿರ
ಪುಷ್ಪಗಂಧ ಸವಿದು ನಿತ್ಯ
ಋಷಿಯ ಬದುಕು ಪಡೆಯಬೇಕು
ಎನುವ ಆಸೆ ನನ್ನದು.

ಕ್ರೂರ-ಸಾಧು ಭೇದವಳಿಸಿ
ಎಲ್ಲ ಜೀವಿ ಬಳಗದಲ್ಲಿ
ಸಾಮರಸ್ಯ ಬೆಳೆಸಬೇಕು
ಎನುವ ಆಸೆ ನನ್ನದು.

ಕಾಡನಾಶ ಮಾಡುತಿರುವ
ದುರುಳರನ್ನು ತಡೆದು ಬುದ್ದಿ
ಕಲಿಸಿ, ಕಾಡ ಉಳಿಸಬೇಕು
ಎನುವ ಆಸೆ ನನ್ನದು.


ದೀಪಕ ಬಿಳ್ಳೂರ
ಬೆಂಗಳೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group