ದೇಶಾಭಿಮಾನ ಉಕ್ಕಿಸಿದ ಲಯನ್ಸ್ ದೇಶಭಕ್ತಿ ಗಾಯನ ಸಂಜೆ

Must Read

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು 73ನೇ ಗಣರಾಜ್ಯೋತ್ಸವದ ಅಂಗವಾಗಿ ದೇಶಭಕ್ತಿ ಗಾಯನ ಸಂಜೆ ಕಾರ್ಯಕ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.

ಮುನ್ಯಾಳದ ಆರೂಢ ಜ್ಯೋತಿ ಸುಗಮ ಸಂಗೀತ ಕಲಾ ತಂಡದ ಯುವ ಗಾಯಕರು ದೇಶಭಕ್ತಿ ಹಾಡುಗಳನ್ನು ಹೇಳಿ ಕೇಳುಗರಲ್ಲಿ ದೇಶಾಭಿಮಾನವನ್ನು ಉಕ್ಕಿಸಿದರು.

‘ಇದು ಬಾಪೂಜಿ ಬೆಳಗಿದ ಭಾರತ’ ‘ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀಗಾಗು’ ‘ಜೋಗದ ಸಿರಿ ಬೆಳಕಿನಲಿ’ ಹಾಡುಗಳನ್ನು ಗಾಯಕ ಶಿವಾನಂದ ಬಿದರಿ ಸುಶ್ರಾವ್ಯವಾಗಿ ಗಾಯನ ಮಾಡಿ ಸಂಗೀತ ಪ್ರಿಯರ ಮನ ತಣಿಸಿದರು.

ಮಹಾಲಿಂಗಪೂರದ ಯವ ಗಾಯಕಿ ಮನುಪ್ರಿಯಾ ‘ಸೋಜುಗಾರ ಸೂಜುಮಲ್ಲಿಗೆ ಮಹಾದೇವ ನಿನ್ನ ಮಂಡೆಮೇಲೆ ದುಂಡು ಮಲ್ಲಿಗೆ’ ಇಂಪಾಗಿ ಹೇಳಿ ಶ್ರೋತೃಗಳು ತಲೆದೂಗುವಂತೆ ಮಾಡಿದರು. ನಂತರ ಪ್ರಸ್ತುತಪಡಿಸಿದ ‘ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ’ ಭಾವಗೀತೆಯನ್ನು ಭಾವತುಂಬಿ ಗಾಯನ ಮಾಡಿ ಎಲ್ಲರಿಂದ ಮೆಚ್ಚುಗೆಯ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.

ಒಂದು ಗಂಟೆಯ ವರೆಗೆ ನಡೆದ ದೇಶಭಕ್ತಿಯೊಂದಿಗೆ ಭಾವಗೀತೆ, ತತ್ವಪದಗಳ ಸುಮಧುರ ಗಾಯನಕ್ಕೆ ಅಪ್ಪಣ್ಣ ಮುಗಳಖೋಡ ತಬಲಾ ಸಾಥ್ ಹಾಗೂ ಭರತ ಚಿನ್ನಾಕಟ್ಟಿ ಅವರ ಹಾರ್ಮೋನಿಯಮ್‍ವು ಮೆರಗು ನೀಡಿತ್ತು.

ಗಾಯನದೊಂದಿಗೆ ದೇಶಭಕ್ತಿ ರೂಪಕ ನೃತ್ಯ ಹಾಗೂ ಪುಟಾಣಿಗಳ ಹಾಡುಗಳು ಕಾರ್ಯಕ್ರಮಕ್ಕೆ ರಂಜನೆ ನೀಡಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಎಂಜೆಎಫ್ ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಎನ್.ಟಿ. ಪಿರೋಜಿ, ಪುಲಕೇಶ ಸೋನವಾಲಕರ, ಶಿವಾನಂದ ಗಾಡವಿ, ಮಹಾವೀರ ಸಲ್ಲಾಗೋಳ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಸಚಿನ ತಮ್ಮಣ್ಣವರ, ಶಿವಾನಂದ ಕಿತ್ತೂರ ಅಪ್ಪಣ್ಣ ಬಡಿಗೇರ ಮತ್ತಿತರರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group