ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Must Read

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮಡಿವಾಳ ಸಮಾಜದ ಹಿರಿಯರು ವೈದ್ಯ ಡಾ. ರಾಮಲಿಂಗಪ್ಪ ಅಗಸರ ಅವರ ತೋಟದ ಮನೆ ಅಂಗಳದಲ್ಲಿ ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಕಂಡಿರುವ ವಚನ ರಕ್ಷಕ ಶರಣ ಮಡಿವಾಳ ಮಾಚಿದೇವರ ಭಾವ ಚಿತ್ರಕ್ಕೆ ಮಹಾ ಪೂಜೆ ಮಂಗಳಾ ಆರತಿ ನೆರವೇರಿಸಿ ಮನೆಯ ಕುಟುಂಬಸ್ಥರು ಸಿಹಿ ಪ್ರಸಾದ ತಯಾರಿಸಿ ಸಹ ಭೋಜನ ಮಾಡಿದರು.

ವೈದ್ಯ ಸಂಗಮೇಶ ಸಗರ, ಶಿಕ್ಷಕ ಸಾಹಿತಿ ಬಸವರಾಜ ಅಗಸರ, ಮಹೇಶ ಅರಳಗುಂಡಗಿ, ಪ್ರೀತಿ ಸಗರ, ನೀಲಮ್ಮ ಸಗರ, ವಿನಯಕುಮಾರ ಸಗರ, ಗುರುಬಾಯಿ ಅಗಸರ ಭಾಗವಹಿಸಿದ್ದರು.

ತತ್ವಪದ ಸಾಹಿತ್ಯ ಸಿರಿ ಪ್ರಶಸ್ತಿ ವಿಜೇತ ಹಾಗೂ ವೈದ್ಯ ರಾಮಲಿಂಗಪ್ಪ ಅಗಸರ ಮಡಿವಾಳ ಮಾಚಿದೇವರ ವಚನಗಾಯನ ನೆರವೇರಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group