ನದಾಫ್, ಪಿಂಜಾರ ನಿಗಮಕ್ಕೆ ಆಗ್ರಹಿಸಿ ಮನವಿ

Must Read

ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ನದಾಫ್,ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ನದಾಫ್,ಪಿಂಜಾರ ಸಂಘ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರಂದು ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ತಾಲೂಕಾ ಘಟಕದ ಅಧ್ಯಕ್ಷ ಅನ್ವರ ನದಾಫ್ ಮಾತನಾಡಿ, ರಾಜ್ಯದಲ್ಲಿ ನದಾಫ್,ಪಿಂಜಾರ ಸಮಾಜ 30 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿದ್ದು ಸಮಾಜದ ಹಿತದೃಷ್ಟಿಯಿಂದ ಸರ್ಕಾರ ನಿಗಮವನ್ನು ಸ್ಥಾಪಿಸಿ ನದಾಫ್,ಪಿಂಜಾರ ಜನಾಂಗಕ್ಕೆ ನೆರವು ನೀಡಬೇಕೆಂದರು.

ನದಾಫ್, ಪಿಂಜಾರ ಜನರು ಗಾದಿ,ಗುಡಾರಗಳನ್ನು ತಯಾರಿಸುವ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ ಇದುವರೆಗೂ ನಮ್ಮ ಜನಾಂಗದಲ್ಲಿ ಉನ್ನತ ಮಟ್ಟದ ಅಧಿಕಾರಿ,ಅಧಿಕಾರದಲ್ಲಾಗಲಿ ಕಾರ್ಯ ನಿರ್ವಹಿಸಿಲ್ಲ ಸಮಾಜದ ಅಭಿವೃದ್ದಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆಗಾಗಿ ಬಹು ದಿನಗಳ ಬೇಡಿಕೆಯಾಗಿದ್ದು ಈ ಹಿಂದೆ ನಿಗಮ ಸ್ಥಾಪನೆಗೆ ಸಮಾಜದಿಂದ ಮನವಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಆದ್ದರಿಂದ ಸರ್ಕಾರ ಶೀಘ್ರ ಸಮಾಜದ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮೀರಾಸಾಬ ನದಾಫ್, ಖಜಾಂಚಿ ಇಸಾಕ ಆಹ್ಮದ ನದಾಫ್, ಅಪ್ಪಾಸಾಬ ನದಾಫ್, ದಸ್ತಗೀರ ನದಾಫ್, ಮಲೀಕಜಾನ ನದಾಫ್,ಝಾಕೀರ ನದಾಫ್, ಮುಬಾರಕ ಪಿಂಜಾರ, ರಫೀಕ ನದಾಫ್, ಸೈಯ್ಯದ ನದಾಫ್ ಅಪ್ಪಾಸಾಬ ನದಾಫ್, ಇರ್ಫಾನ್ ನದಾಫ್, ಲಾಡಜಿಸಾಬ ನದಾಫ್, ಅಕ್ಬರ ನದಾಫ್, ಬಾಬು ನದಾಫ್ ಹಾಗೂ ತಾಲೂಕಿನ ಹೊನಕುಪ್ಪಿ,ಮುಸಗುಪ್ಪಿ, ಕಲ್ಲೋಳಿ,ಪಟಗುಂದಿ ಗ್ರಾಮಗಳಿಂದ ಆಗಮಿಸಿದ ಸರ್ವ ಸದಸ್ಯರು ಭಾಗವಹಿಸಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group