ಮನರೇಗಾ ಯೋಜನೆಯ ವಿವಿಧ ಕಾಮಗಾರಿಗಳ ವೀಕ್ಷಣೆ

Must Read

ಮುನವಳ್ಳಿ: ಸಮೀಪದ ಶಿಂಧೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡು ಪ್ರಗತಿ ಹಂತದಲ್ಲಿರುವ ಸಮಗ್ರ ಶಾಲಾಭಿವೃದ್ದಿ ಕಾಮಗಾರಿಗಳಾದ ಭೋಜನಾಲಯ, ಸಮುದಾಯ ಸೋಕ ಪಿಟ್, ಆವರಣಗೋಡೆ, ಗೇಟ್ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ , ಶೌಚಾಲಯ ನಿರ್ಮಾಣ, ಮತ್ತು ಪೇವರ್ಸ ಅಳವಡಿಸುವ ಕಾಮಗಾರಿಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಿಆರ್ ಎಮ್ ತಂಡದ ಸದಸ್ಯರಾದ ಡಾ: ಸುಖವಿಂದರಸಿಂಗ ಜೋಹಾಲ, ಮುಸುಕು ರಾಜಶೇಖರ ರೆಡ್ಡಿ, ಪಿ.ಜಿ.ವೇಣುಗೋಪಾಲ , ಜಂಟಿ ನಿರ್ದೇಶಕರು , ಗ್ರಾಮೀಣಾಭಿವೃದ್ಧಿ ಆಯುಕ್ತಾಲಯರವರು ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಈ ಎಲ್ಲ ಕಾಮಗಾರಿಗಳು ಶಾಲಾ ಮಕ್ಕಳಿಗೆ ಅತಿ ಉಪಯುಕ್ತ ವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾನ್ಯ ಯೋಜನಾ ನಿರ್ದೇಶಕರು ರವಿ ಬಂಗಾರೆಪ್ಪನವರ,ಜಿಲ್ಲಾ ಪಂಚಾಯತ ಬೆಳಗಾವಿ, ಮಾನ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಯಶವಂತಕುಮಾರ, ಮಾನ್ಯ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ)ರಾದ ಸಂಗನಗೌಡ ಹಂದ್ರಾಳ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಾನ್ಯ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಪಂಚಾಯತಿ ರಮೇಶ ಬೆಡಸೂರ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group