ಬೆಳಗಾವಿ – ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ 2019 ನೆ ಸಾಲಿನ ಅಪ್ಪಾಸಾಹೇಬ ಸದರಜೋಶಿ ಹಾಗೂ ಕುಟುಂಬ ದತ್ತಿನಿಧಿ ಪ್ರಶಸ್ತಿ ಡಾ. ಹೇಮಾವತಿ ಸೊನೊಳ್ಳಿ ಅವರಿಗೆ ದೊರಕಿದೆ. ಅವರ ಸ್ಪಂದನ ವೈಚಾರಿಕ ಲೇಖನಗಳ ಕೃತಿಗೆ ಈ ಪ್ರಶಸ್ತಿ ದೊರಕಿದ್ದು, ಡಾ. ಹೇಮಾವತಿ ಸೊನೊಳ್ಳಿ ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ ಪೃಥ್ವಿ ಫೌಂಡೇಶನ್ ಅಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ನಂದಗಡದಲ್ಲಿ ಎನ್ ಆರ್ ಇ ಸಂಸ್ಥೆಯ ಮಹಾತ್ಮಾ ಗಾಂಧಿ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಡಾ ಹೇಮಾವತಿ ಸೊನೊಳ್ಳಿ ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ವಿವಿಧ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಖಾನಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು ವಿವಿಧೆಡೆಯಿಂದ ಸನ್ಮಾನ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

