ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ: ಬಾಲಚಂದ್ರ ಜಾರಕಿಹೊಳಿ

Must Read

10 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ

ಮೂಡಲಗಿ: ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರದಲ್ಲಿ ಆರ್.ಡಿ.ಪಿ.ಆರ್ ಯೋಜನೆಯಡಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

ಮಾರ್ಚ ತಿಂಗಳ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಭೆಟ್ಟಿ ನೀಡಿ ಕೆಲಸಗಳ ಗುಣಮಟ್ಟವನ್ನು ಪರಿಶೀಲಿಸಬೇಕು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡರೆ ರಸ್ತೆಗಳು ಹಾಳಾಗುವುದಿಲ್ಲ, ಸಾರ್ವಜನಿಕ ಅನುಕೂಲಕ್ಕಾಗಿ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ತಿಳಿಸಿದರು.

ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನವು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲಿದೆ, ಜೊತೆಗೆ ದೇವಸ್ಥಾನಗಳ ಜೀರ್ಣೋದಾರಕ್ಕಾಗಿ ಎರಡು ಕೋಟಿ ರೂ ಅನುದಾನ ಸಹ ಬರಲಿದೆ ಎಂದು ಹೇಳಿದರು.

ರಸ್ತೆ ಕಾಮಗಾರಿಗಳ ವಿವರ: ಮೂಡಲಗಿ ತಾಲೂಕಿನ ಹಳ್ಳೂರ ಗಾಂಧಿ ನಗರದಿಂದ ಬಸವನಗರ ರಸ್ತೆ ಸುಧಾರಣೆಗೆ 80 ಲಕ್ಷ ರೂಪಾಯಿ, ನಾಗನೂರ ನಿಪನಾಳ ರಸ್ತೆ ಸುಧಾರಣೆಗೆ 1.50 ಕೋಟಿ ರೂಪಾಯಿ, ಪಟಗುಂದಿಯಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ತೆ ಸುಧಾರಣೆಗೆ 1.20 ಕೋಟಿ ರೂಪಾಯಿ, ಕಮಲದಿನ್ನಿ ಗ್ರಾಮದಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ಥೆ ಸುಧಾರಣೆಗೆ 80 ಲಕ್ಷ ರೂಪಾಯಿ, ಹೊನಕುಪ್ಪಿಯಿಂದ ಬಿಲಕುಂದಿ ರಸ್ತೆ ಸುಧಾರಣೆಗೆ 90 ಲಕ್ಷ ರೂ, ಹುಣಶ್ಯಾಳ ಪಿ.ಜಿ ಹಳೇ ಗ್ರಾಮದಿಂದ ಹೊಸ ಗ್ರಾಮದ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಬಿಲಕುಂದಿ-ಗೊಸಬಾಳ ರಸ್ತೆ ಸುಧಾರಣೆಗೆ 1.20 ಕೋಟಿ ರೂ, ಕೌಜಲಗಿ-ರಡೇರಹಟ್ಟಿ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಕಲಾರಕೊಪ್ಪ ಗ್ರಾಮದಿಂದ ದಂಡಿನ ಮಾರ್ಗ ಕೂಡು ರಸ್ತೆಗೆ 80 ಲಕ್ಷ ರೂ, ರಡ್ಡೇರಹಟ್ಟಿ-ಯಾದವಾಡ ರಸ್ತೆ ಸುಧಾರಣೆಗೆ 80 ಲಕ್ಷ ರೂ, ಮನ್ನಿಕೇರಿಯಿಂದ ಮಳ್ಳಿಕೇರಿ ರಸ್ತೆ ಸುಧಾರಣೆಗೆ 80 ಲಕ್ಷ ರೂ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಹಳ್ಳೂರ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಸ್.ಸಂತಿ, ಬಿ.ಜಿ.ಸಂತಿ, ಭೀಮಶಿ ಮಗದುಮ್, ಹನಮಂತ ತೇರದಾಳ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಅಡಿವೇಪ್ಪ ಪಾಲಬಾಂವಿ, ಮಲ್ಲಪ್ಪ ಚಬ್ಬಿ, ಸುರೇಶ ಡಬ್ಬನ್ನವರ, ಲಕ್ಷ್ಮಣ ಛಭ್ಭಿ, ಶಂಕರ ಬೊಳನ್ನವರ, ಸುರೇಶ ಕತ್ತಿ, ಕುಮಾರ ಲೋಕನ್ನವರ, ಶ್ರೀಶೈಲ್ ಬಾಗೋಡಿ, ಬಸಪ್ಪ ನಾವಿ, ಶಿವಪ್ಪ ಅಟ್ಟಮಟ್ಟಿ, ಪ್ರಕಾಶ ಕೊಂಗಾಲಿ, ಶ್ರೀಶೈಲ್ ಅಂಗಡಿ, ಸದಾಶಿವ ಮಾವರಕರ, ಬಿ.ಕೆ.ಗಂಗರಡ್ಡಿ, ಹಳ್ಳೂರ ಗ್ರಾ.ಪಂ ಸದಸ್ಯರು ಮತ್ತಿತರರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group