ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಮಾದರಿ ವೇತನ ಕೊಡಿಸಿ: ನೌಕರರ ಸಂಘದ ಅಧ್ಯಕ್ಷರಿಗೆ ಮನವಿ

Must Read

ಬೆಳಗಾವಿ: ಕ.ರಾ.ಸ.ಹಿರಿಯ ಹಾಗು ಪದವೀಧರೇತರ ಪ್ರಾ.ಶಾಲಾ ಮುಖ್ಯೋಪಾಧ್ಯಾಯರ ಸಂಘ (ರಿ) ಬೆಂಗಳೂರು ಕೇಂದ್ರ ಸಂಘದ ರಾಜ್ಯ ಸಮಿತಿಯ ವತಿಯಿಂದ ಇಂದು ಬೆಂಗಳೂರಿನಲ್ಲಿನ ಕಬ್ಬನ್ ಪಾರ್ಕ್ ನಲ್ಲಿರುವ ಸರಕಾರಿ ನೌಕರರ ಸಂಘದ ಶತಮಾನೋತ್ಸವದ ಭವನದಲ್ಲಿಯ ರಾಜ್ಯ ಅಧ್ಯಕ್ಷರಾದ ಕೆ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ರಾಜ್ಯದ ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಷಡಕ್ಷರಿ ಸರ್ ರವರು ಆಗಮಿಸಿ ನೌಕರರ ಬೇಡಿಕೆ ಗಳಿಗೆ ರಾಜ್ಯ ಸರಕಾರ ಸ್ಪಂದನೆ ಮಾಡುವ ಭರವಸೆ ವ್ಯಕ್ತ ಪಡಿಸಿದರು ಸಭೆಯಲ್ಲಿ ಷಡಕ್ಷರಿಯವರನ್ನು ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ವತಿಯಿಂದ ಆತ್ಮೀಯವಾಗಿ ಜಿಲ್ಲಾ ಸಂಘದ ಅಧ್ಯಕ್ಷರಾದ ಬಿ ಎಸ್ ಹುಣಸಿಕಟ್ಟಿ ಹಾಗೂ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ರವರ ಮುಂದಾಳತ್ವದಲ್ಲಿ ಅವರನ್ನು ಸನ್ಮಾನ ಮಾಡಿ ಅವರಿಗೆ ಜಿಲ್ಲೆಯ ಮುಖ್ಯ ಶಿಕ್ಷಕರ ಸಂಘದ ಬೇಡಿಕೆ ಗಳಿಗೆ ಬೆಂಬಲ ಬಯಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ತತ್ವದಡಿ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ವೇತನ ಸಿಗುವ ನಿಟ್ಟಿನಲ್ಲಿ ಏಳನೆಯ ಆಯೋಗ ರಚನೆಯಾಗಬೇಕು ಜೊತೆಗೆ ಮುಖ್ಯ ಶಿಕ್ಷಕರ ಹಲವು ಬೇಡಿಕೆಗಳ ಮನವಿ ನೀಡಿದರು ಅದಕ್ಕೆ ಸ್ಪಂದನೆ ಮಾಡುವ ಭರವಸೆ ನೀಡಿದರು, ಬೆಳಗಾವಿ ಜಿಲ್ಲಾ ಸಂಘದ ಮನವಿಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಈ ಸಭೆಯಲ್ಲಿ ರಾಜ್ಯದ ಪದಾಧಿಕಾರಿಗಳು ಜೊತೆಗೆ ಬೆಳಗಾವಿ ಜಿಲ್ಲೆಯ ಸಂಘದ ಪದಾಧಿಕಾರಿಗಳಾದ ರಾಜೇಂದ್ರಕುಮಾರ ಚಲವಾದಿ,ಎ ಡಿ ಸಾಗರ, ಬಿ ಬಿ ಹಟ್ಟಿಹೋಳಿ ಶ್ರೀಕಾಂತ ಶಿಂಗೇನ್ನವರ,ಪ್ರಕಾಶ ಕಾಂಬಳೆ,ಆಶೋಕ ಕೋಲಕಾರ,ಎಸ್ ಎಮ್ ಶಹಪುರಮಠ, ಎನ್ ಎನ್ ಗುಂಡಗಾವಿ, ಕೆ ಜಿ ಭಜಂತ್ರಿ,ವಾಯ ಬಿ ಅಜ್ಜನಕಟ್ಟಿ, ಡಿ ಡಿ ಭೋವಿ, ಎಮ್ ಸಿ ಹಡಪದ,ಬಾಬು ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group