ಪುನೀತ ರಾಜಕುಮಾರ ಹುಟ್ಟುಹಬ್ಬಕ್ಕೆ 60ಜನರ ನೇತ್ರದಾನ

Must Read

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಗುರುನಾಥ ಉಪ್ಪಾರ ಅವರ ನೇತೃತ್ವ ಮತ್ತು ಡಾ.ರಾಮನ್ನವರ ಚಾರಿಟೇಬಲ್ ಟ್ರಸ್ಟ ಹಾಗೂ ಅಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಡಾ.ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಕೆಎಲ್‍ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ 60 ಜನರು ಮರಣಾನಂತರದಲ್ಲಿ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ.

ಕೆಎಲ್‍ಇ ವಿಶ್ವವಿದ್ಯಾಲಯದ ಬಿ.ಎಮ್.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ರಚನಾ ಶಾಸ್ತ್ರ ವಿಭಾಗದ ಡಾ.ಮಹಾಂತೇಶ ರಾಮಣ್ಣವರ ಅವರು ನೇತ್ರದಾನದ ಮಹತ್ವ ಹಾಗೂ ಅದರ ಉಪಯುಕ್ತತೆ ಕುರಿತು ತಿಳಿಸಿದರು.

ಭರಮ್ಮಣ್ಣ ಉಪ್ಪಾರ, ಗುರುನಾಥ ಉಪ್ಪಾರ, ಬಾಳಾಸಾಹೇಬ ಉದಗಟ್ಟಿ, ಶೀಮಾ ಗುರುನಾಥ, ಡಾ.ತುಕಾರಾಮ ಉಮರಾಣಿ ಶಿವಕುಮಾರ ಬೆನಕನಕೊಂಡ, ಪುಂಡಲೀಕ ಕೊಡ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group