ಅಭಯ್ ಅವಲಕ್ಕಿಗೆ ಉತ್ತಮ ಸಮಾಜ ಸೇವಕ ಪ್ರಶಸ್ತಿ

Must Read

ಬೆಳಗಾವಿ: ಬೆಳಗಾವಿ ನಗರದ ಸಾಮಾಜಿಕ ಕಾರ್ಯಕರ್ತ ಅಭಯ ಅವಲಕ್ಕಿಗೆ ಅಂತಾರಾಷ್ಟ್ರೀಯ ಸಂಸ್ಥೆಯಾದ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ) ರವರು ಉತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ನಗರದಲ್ಲಿ ಜಿತೋ ಸಂಸ್ಥೆಯ 16ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉತ್ತಮ ಸಮಾಜ ಸೇವಕ ಪ್ರಶಸ್ತಿಗೆ ಭಾಜನರಾದ ಅಭಯ ಅವಲಕ್ಕಿ ಅವರು ಕಳೆದ 30 ವರ್ಷಗಳಿಂದ ಸಾಮಾಜಿಕ ಧಾರ್ಮಿಕ ರಾಜಕೀಯ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದು ಉತ್ತಮ ಸಂಘಟನಾಕಾರರಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಬಣ್ಣಿಸಿ ಅಭಿನಂದಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಶ್ರೀಮತಿ ಮಂಗಲಾ ಮೆಟಗುಡ್ಡ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಮೋಹನ್ ಬಸನಗೌಡ ಪಾಟೀಲ್, ಕನ್ನಡಪರ ಹೋರಾಟಗಾರ ಪದ್ಮರಾಜ ವೈಜಣ್ಣವರ, ಬೈಲಹೊಂಗಲ್ ತಾಲೂಕ ಕಸಾಪ ಅಧ್ಯಕ್ಷ ಎನ್ ಆರ್ ಠಕಾಯಿ, ಖಾನಾಪುರ್ ತಾಲೂಕ ಕಸಾಪ ಗೌರವ ಕಾರ್ಯದರ್ಶಿ ಕಿರಣ್ ಸಾವಂತನವರ್, ಬೆಳಗಾವಿ ಜಿಲ್ಲಾ ಕಸಾಪ ಸಹ ಮಾಧ್ಯಮ ಪ್ರತಿನಿಧಿ ಆಕಾಶ್ ಅರವಿಂದ್ ಥಬಾಜ, ಚಾಣಕ್ಯ ಯುವಕ ಮಂಡಲ, ಜೈನ ಯುವ ಸಂಘಟನೆ ಒಳಗೊಂಡಂತೆ ಅನೇಕ ಗಣ್ಯರು ಮತ್ತು ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group