ಶ್ರೀಮತಿ ವಿದ್ಯಾ ರೆಡ್ಡಿ ಅವರಿಗೆ ರಾಷ್ಟ್ರಕವಿ ಕುವೆಂಪು ರಾಜ್ಯಮಟ್ಟದ ಪ್ರಶಸ್ತಿ

Must Read

ಬೆಳಗಾವಿ – ಇದೇ ದಿನಾಂಕ 27 ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಾಡಿನ ಸಮಾಚಾರ ದಿನಪತ್ರಿಕೆಗಳ 7 ನೇ ವಾರ್ಷಿಕೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೋಕಾಕದ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರ ಸಾಹಿತ್ಯ ಸೇವೆಗಾಗಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಸವರಾಜ ಸುಣಗಾರ, ಸಂತೋಷ್ ಬಿದರಗಡ್ಡೆ, ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನದ ಬಸವರಾಜ ಗಾರ್ಗಿ, ಕರ್ನಾಟಕ ಜಾನಪದ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಡಾ. ಸಿ ಕೆ ನಾವಲಗಿ, ನಾಗನೂರು ಗ್ರಾಮದ ಸಮಾಜಸೇವಕರಾದ ಎಬಿನೇಜರ್ ಕರಬನ್ನವರ, ಸಂಸ್ಥೆಯ ಅಧ್ಯಕ್ಷ ಬಸವರಾಜ್ ಉಪ್ಪಾರಟ್ಟಿ, ಶ್ರೀಮತಿ ಲಕ್ಷ್ಮಿ ಬಸವರಾಜ್ ಉಪ್ಪಾರಟ್ಟಿ, ಗೋಕಾಕ್ ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಮದಬಾವಿ, ಸಂಚಾಲಕರಾದ ಸತ್ಯಪ್ಪ ಕರವಾಡಿ, ರಮೇಶ್ ಮಾದರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group