ಕವನ: ಚೈತ್ರಮಾಸ

Must Read

ಚೈತ್ರಮಾಸ

ಸಂಸ್ಕೃತಿಯ ಸಾರಿದ
ಹೊಸ ವರುಷದ ಹರಿಕಾರ
ಯುಗಾದಿಯ ಸಿಂಗಾರ
ಚೈತ್ರಮಾಸದ ಚಿತ್ತಾರ……

ತಳಿರು ತೋರಣದ ಸಿಂಗಾರ
ಮನೆಯ ಬಾಗಿಲಿಗೆ ಬಂಗಾರ
ರಂಗೋಲಿ ಬಣ್ಣದ ಚಿತ್ತಾರ
ಎಲ್ಲಿಯೂ ಹಬ್ಬದ ಸಡಗರ……

ಕೋಗಿಲೆಯ ಇಂಪು
ಮಾವಿನ ತಂಪು
ಬೇವಿನ ಕಂಪು
ಚಿಗುರಲೆಯ ಸಡಗರವು…..

ಮಾವು ಬೇವಿನ
ತಳಿರು ತೋರಣ
ಹಬ್ಬದ ದಿಬ್ಬಣ
ಎಲ್ಲರ ಮನೆಯಲ್ಲಿ ಹೂರಣ….

ಮಾಸದ ನೆನಪುಗಳು ಇಂದಿಗೆ
ಅಳಿಸಿ ಹೋಗಲಿ ಎಂದಿಗೂ
ನವಮಾಸದ ಚಿಗುರಿಗೆ
ನಗೆಯ ಹೂವಿನ ಸ್ವಾಗತಕ್ಕೆ…….


ರೇಣುಕ.ಶಿವಪ್ಪ
ಶಿವಮೊಗ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group