ಕಾಲ್ಗೆಜ್ಜೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಒಡತಿಯ
ಕಾಲ್ಗೆಜ್ಜೆ…
ಮಾಧುರ್ಯದ ಸವಿಗಾನ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಏನ್ ಕಂದನ
ಕಾಲ್ಗೆಜ್ಜೆ…
ತಂಪನೆಯ ಸುಳಿಗಾಳಿ
ಸೂಸುತ್ತಿದೆ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ನನ್ ಮಡದಿಯ ಕಂದನ
ಕಾಲ್ಗೆಜ್ಜೆ…
ಬಾಣ ಬಿರುಸಿನ ಮಳೆಯು
ಸೀಳುತ್ತಿದೆ ರಸ್ತೆಯ ಹಾದಿಯಲ್ಲಿ
ಮಲೆನಾಡಿನ ಮಡಿಲಲ್ಲಿ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ಕಾಲ್ಗೆಜ್ಜೆ…
ಬಾಳ ಸಂಗಾತಿ ನೀಡಿಹಳು
ಏನ್ ಬದುಕಿಗೆ ಬಂಗಾರದ ಕಳಶ
ಮನೆಯ ಒಳಗೆ ಹೊರಗೆ
ಮನದ ಕೋಣೆಯೊಳಗೆ
ಸದ್ದು ಮಾಡುತ್ತಿದೆ
ನನ್ ಕೂಸಿನ
ಕಾಲ್ಗೆಜ್ಜೆ…
ತೀರ್ಥಹಳ್ಳಿ ಅನಂತ, ಕಲ್ಲಾಪುರ