ಮೂಡಲಗಿ ಶ್ರೀ ಶಿವಬೋಧರಂಗ ಕೋ.ಆಪ್ ಸೊಸೈಟಿಗೆ ರೂ. 4.11 ಕೋಟಿ ಲಾಭ

Must Read

ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ್ ಅಂತ್ಯಕ್ಕೆ ರೂ. 4.11 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಅವರು ತಿಳಿಸಿದರು.

ಸೊಸೈಟಿಯ ಪ್ರಗತಿಯ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸೊಸೈಟಿಯು ರೂ. 4.82 ಕೋಟಿ ಶೇರು ಬಂಡವಾಳ, ರೂ. 19.74 ಕೋಟಿ ಕಾಯ್ದಿಟ್ಟ ನಿಧಿಗಳು, ರೂ. 241.67 ಕೋಟಿ ಠೇವುಗಳನ್ನು ಹೊಂದಿದೆ ಎಂದರು.

ಸೊಸೈಟಿಯು ಗ್ರಾಹಕರ ಭದ್ರತೆಗಾಗಿ ಇತರೆ ಬ್ಯಾಂಕ್‍ಗಳಲ್ಲಿ ರೂ. 76.28 ಕೋಟಿ ಹೂಡಿಕೆ ಮಾಡಿದೆ. ರೂ. 145.14 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡಿದೆ. ಸದ್ಯ ಸೊಸೈಟಿಯು ರೂ. 280.13 ಕೋಟಿ ದುಡಿಯುವು ಬಂಡವಾಳ ಹೊಂದಿದೆ ಎಂದರು.

ಸೊಸೈಟಿಯ ಉಪಾಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಸೊಸೈಟಿಯು ಈ ವರೆಗೆ 12 ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಉತ್ತಮ ಪ್ರಗತಿಯಲ್ಲಿವೆ. ಇನ್ನೂ ಐದು ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕರಾದ ಬಿ.ವಿ. ಗುಲಗಾಜಂಬಗಿ, ಅಶೋಕ ಹೊಸೂರ, ಡಾ. ಶಂಕರ ದಂಡಪ್ಪನವರ, ಸುಭಾಸ ಸೋನವಾಲಕರ, ರವೀಂದ್ರ ಸೋನವಾಲಕರ, ಶಿವಬಸು ಬೂದಿಹಾಳ, ಗಂಗವ್ವ ಸಣ್ಣಪ್ಪನವರ, ಶಾರದಾ ಗುಲಗಾಜಂಬಗಿ, ವಿದ್ಯಾವತಿ ಸೋನವಾಲಕರ, ಮಂಜುಳಾ ಬಳಿಗಾರ, ಹಣಮಂತ ಸಣ್ಣಕ್ಕಿ ಹಾಗೂ ಹಾಗೂ ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ ಇದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group