ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ಕರೆ

0
293

ಮೂಡಲಗಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ಮುಟ್ಟಿಸುವಂತ ಪ್ರಾಮಾಣಿಕ ಪ್ರಯ್ನತ ಮಾಡಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ದಾಸಪ್ಪ ನಾಯಕ್ ಹೇಳಿದರು.

ಬುಧವಾರದಂದು ಪಟ್ಟಣದ ಅರಭಾವಿ ಮಂಡಲದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಬಿಜೆಪಿ ಸಂಸ್ಥಾಪನ ದಿನದ ನಿಮಿತ್ತ ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಲಯದ ಮೇಲೆ ಬಿಜೆಪಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿಯವರು ಅರಭಾವಿ ಕ್ಷೇತ್ರದ ಜನರಿಗೋಸ್ಕರ ಸಾಕಷ್ಟು ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಾರ್ಯಕರ್ತರು ಸಹ ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕೆಂದರು.

ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದೀಜಿ ಅವರ ಭಾಷಣವನ್ನು ಟಿವಿ ಮಾಧ್ಯಮದಲ್ಲಿ ವೀಕ್ಷಿಸಲಾಯಿತು ಹಾಗೂ ಅರಭಾವಿ ವಿವಿಧ ಭೂತ್ ಅಧ್ಯಕ್ಷರುಗಳ ಮನೆಯ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕುಡಚಿ, ಮಂಡಲ ಕಾರ್ಯದರ್ಶಿ ಪಾಂಡು ಮಹೇಂದ್ರಕರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೇದಾರಿ ಭಸ್ಮೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಮಲಾ ಬಡಗಾವಿ, ಜಗದೀಶ್ ತೇಲಿ, ಕುಮಾರ್ ಗಿರಡ್ಡಿ, ಪರಪ್ಪ ಹಡಪದ್, ಉಮೇಶ ಬೆಳಕೂಡ, ಆನಂದ್ ಸಾನವಾಲೆ, ಲಕ್ಷ್ಮಣ ಸಾನವಾಲೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.