spot_img
spot_img

ಸಮಸ್ಯೆ ಪರಿಹರಿಸಿ, ಇಲ್ಲವಾದರೆ ಮನೆಗೆ ಹೋಗಿ ; ಸಿಂದಗಿ ಮುಖ್ಯಾಧಿಕಾರಿಗೆ ಖಡಕ್ ವಾರ್ನಿಂಗ್ ಮಾಡಿದ ಬಿರಾದಾರ

Must Read

spot_img
- Advertisement -

ಸಿಂದಗಿ: ಆಸ್ತಿ ತೆರಿಗೆ ದರ ಪ್ರತಿಶತ 5 ರಂತೆ ಪರಿಷ್ಕರಣೆ ಮಾಡುವಂತೆ ಸರಕಾರ ಆದೇಶ ಬಂದಿದ್ದು ಅದಕ್ಕೆ ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯದ ಮೇರೆಗೆ ವಸತಿಗೆ 3% ವಾಣಿಜ್ಯ ಮಳಿಗೆಗಳಿಗೆ 4% ದರ ಪರಿಷ್ಕರಣೆ ಮಾಡುವಂತೆ ಸಲಹೆ ಪಡೆದು ಅನುಮೋದನೆ ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗಾಗಿ ಕರೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭೆ ಸದಸ್ಯ ಶಾಂತವೀರ ಬಿರಾದಾರ ಮಾತನಾಡಿ, ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡುವಂತೆ ಸರಕಾರ ಆದೇಶವಿದೆ ಆದರೆ ಪ್ರತಿದಿನ ಆಫೀಸಿನಲ್ಲಿ ಕುಳಿತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಅವರು ಇಲ್ಲಿಯೇ ಝಂಡಾ ಹೂಡಿ ಪ್ರತಿದಿನ ವಾರ್ಡುಗಳನ್ನು ಪರಿಶೀಲಿಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಜನರಿಗೆ ಯಾವ ಸೌಲಭ್ಯ ನೀಡಿದ್ದೀರಿ ಅನ್ನುವುದು ನಿಮಗೆ ಅರಿವಾಗುತ್ತದೆ.ನಾಮ್ ಕೆ ವಾಸ್ತೆ ಆಫೀಸಿಗೆ ಬಂದು ಮೀಟಿಂಗ್ ನೆಪದಲ್ಲಿ ಓಡಿ ಹೋದರಲ್ಲ ಪ್ರತಿ ದಿನ ವಾರ್ಡಗೆ ಭೇಟಿ ನೀಡಿದ ವರದಿ ಸದಸ್ಯರಿಗೆ ತಿಳಿಸಿ ಎಂದು ರೇಗಾಡಿದರು.

- Advertisement -

ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಪಟ್ಟಣದಲ್ಲಿ ಮಂಗಲ ಕಾರ್ಯಾಲಯಗಳು ಎಷ್ಟು ಪರವಾನಿಗೆ ಪಡೆದುಕೊಂಡಿವೆ ಅನ್ನುವುದರ ಬಗ್ಗೆ ಪರಿಶೀಲಿಸಿ ಅಲ್ಲದೆ ಅನುದಾನಿತ ಶಾಲೆಗಳಿಗೆ ಪ್ರತಿಶತ 25 ರಷ್ಟು ಆಸ್ತಿ ತೆರಿಗೆ ಪಾವತಿಸಿಕೊಳ್ಳುವಂತೆ ಕಳೆದ 10 ವರ್ಷಗಳ ಹಿಂದೆ ಆದೇಶ ಬಂದಿದೆ ಆದರೆ ಅಧಿಕಾರಿಗಳು ಇಲ್ಲಿಯವರೆಗೆ ಏನು ಮಾಡುತ್ತಿದ್ದೀರಿ ಬರೀ 52% ರಷ್ಟು ಮಾತ್ರ ವಸೂಲಾತಿಗೆ ಆಗಿದೆ ಇನ್ನೂ 48% ಬರಬೇಕಾಗಿದೆ ಇದರಿಂದ ಮುನ್ಸಿಪಾಲಿಟಿಗೆ ಸೋರ್ಸ್ ಇಲ್ಲದೆ ಸೋರಿ ಹೋಗಿದೆ ಸುಮ್ಮನೆ ಆಫೀಸಿನಲ್ಲಿ ಕುಳಿತರೇ ಸಾಲದು ಸದಸ್ಯರಾದಿಯಾಗಿ ಎಲ್ಲರು ವಸೂಲಾತಿಯಲ್ಲಿ ಬಾಗಿಯಾಗುತ್ತೇವೆ ಎಂದು ಸಲಹೆ ನೀಡಿದರು.

ಸದಸ್ಯ ಸಂದೀಪ ಚೌರ ಮಾತನಾಡಿ, ಪಟ್ಟಣದಲ್ಲಿ ವಸತಿ ಮನೆಗಳೆಷ್ಟು ವಾಣಿಜ್ಯ ಮಳಿಗೆಗಳೆಷ್ಟು ಎಂಬುವುದರ ಬಗ್ಗೆ ಮಾಹಿತಿ ನೀಡುವಂತೆ ಹಲವಾರು ಬಾರಿ ಕೇಳಿದಾಗ್ಯೂ ಮಾಹಿತಿ ಪೂರೈಸಿಲ್ಲ ಅಲ್ಲದೆ ಪಟ್ಟಣದ 10604 ಮನೆಗಳಿಗೆ ಅವುಗಳಿಗೆ ನೀರು ಸರಬರಾಜು ಆಗುತ್ತಿವೆ ಅದರಲ್ಲಿ 2892 ಮನೆಗಳು ನಳಗಳ ಪರವಾನಿಗೆ ಪಡೆದುಕೊಂಡಿವೆ ಪುರಸಭೆ ಸಿಬ್ಬಂದಿಯ ನಿರ್ಲಕ್ಷತನದಿಂದ 7ಸಾವಿರ ಮನೆಗಳಿಗೆ ಅನಧಿಕೃತವಾಗಿ ನೀರು ಪೂರೈಕೆಯಾಗುತ್ತಿವೆ ಹೀಗಾದರೆ ಪುರಸಭೆಗೆ ಎಲ್ಲಿಂದ ಆದಾಯ ಬರಬೇಕು ಎಂದು ಆರೋಪಿಸಿದರು.

ಸದಸ್ಯ ಶರಣಗೌಡ ಬಿರಾದಾರ ಮಾತನಾಡಿ, ಪ್ರತಿವರ್ಷ ಕನಿಷ್ಠ ರೂ 3 ಕೋಟಿಗೂ ಅಧಿಕ ಟ್ಯಾಕ್ಸ ವಸೂಲಾತಿ ಆಗಬೇಕು ಅದರಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಕೇಳಿದರು.

- Advertisement -

ಅದಕ್ಕೆ ಮುಖ್ಯಾಧಿಕಾರಿ ಉತ್ತರಿಸಿ ರೂ. 1.7313000 ಮಾತ್ರ ವಸೂಲಿಯಾಗಿದೆ ಇನ್ನೂಳಿದದ್ದು ಮುಂದೆ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

ಸದಸ್ಯೆ ಪ್ರತಿಬಾ ಕಲ್ಲೂರ ಮಾತನಾಡಿ, ವಾರ್ಡುಗಳಲ್ಲಿ ಗಟಾರುಗಳನ್ನು ಸ್ವಚ್ಚಗೊಳಿಸುವಂತೆ ಹಲವಾರು ಬಾರಿ ಹೇಳಿದಾಗ ತೆಗೆಯುತ್ತಾರೆ ಆದರೆ ಅದನ್ನು ಸಾಗಿಸದೇ ಅಲ್ಲಿಯೇ ಬಿಡುವುದರಿಂದ ಮತ್ತೆ ಅದೇ ಗಟಾರದಲ್ಲಿ ಬಿದ್ದು ಮತ್ತೆ ಚರಂಡಿಗಳು ತುಂಬಿ ಗಬ್ಬೆದ್ದು ನಾರುವಂತ ದುಸ್ಥಿತಿ ಬಂದಿದೆ ಇದರಿಂದ ವಾರ್ಡ ಜನತೆ ಮನೆ ಮುಂದೆ ಬಂದು ಹಿಡಿಶಾಪ ಹಾಕುತ್ತಿದ್ದಾರೆ ಎಂಂದು ದೂರಿದರು.

ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮತ್ತು ಉಪಾದ್ಯಕ್ಷ ಹಾಸೀಂ ಆಳಂದ ಅವರು ಇದರ ಬಗ್ಗೆ ಸೂಕ್ಷ್ಮವಾಗಿ ಪರಿಗಣಿಸುವಂತೆ ಮುಖ್ಯಾದಿಕಾರಿಗೆ ಸೂಚಿಸಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group