ರಾಜ್ಯಾದ್ಯಂತ “ಪ್ರಾಮಿಸ್” ಪೋಸ್ಟರ್ ವೈರಲ್

Must Read

ರಾಜ್ಯದ ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ “ಪ್ರಾಮಿಸ್” ಚಿತ್ರದ ಪೋಸ್ಟರ್. ನಟ ವಿಶ್ವಪ್ರಕಾಶ ಟಿ ಮಲಗೊಂಡ ಅಭಿನಯದ ಆರನೇ ಚಿತ್ರ “ಪ್ರಾಮಿಸ್” ಪೋಸ್ಟರ್ ಬಿಡುಗಡೆಯಾದ ಎರಡೇ ದಿನಕ್ಕೆ ರಾಜ್ಯಾದ್ಯಂತ ವೈರಲ್ ಆಗಿದೆ.

ಸಿನಿ ಪ್ರೇಕ್ಷಕರ ಮನಗೆದ್ದು ತಲೆಗೆ ಹುಳ ಬಿಟ್ಟಿರುವ ಈ ಪೋಸ್ಟರ್, ಚಿತ್ರದ ಕುರಿತು ಹಲವಾರು ಕಲ್ಪನೆಗಳನ್ನು ಹುಟ್ಟು ಹಾಕುತ್ತಿದೆ. ಸಿನಿಪ್ರಿಯರ ಕುತೂಹಲವನ್ನು ಇಮ್ಮಡಿಗೊಳಿಸಿ, ಬಿಡುಗಡೆಯ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಲಕ್ಕಿ ಹಾಗೂ ವಿಶ್ವಪ್ರಕಾಶ ಕಾಂಬಿನೇಷನ್ ನ ಎರಡನೇ ಚಿತ್ರವಾಗಿದ್ದು.

ತಾರುಣ್ಯಾವಸ್ಥೆಯ ಬದುಕನ್ನು ವಿಮರ್ಶಿಸುವ ಚಿತ್ರವಿದು ಎಂದು ಸಾಕಷ್ಟು ಜನ ಊಹಿಸಿದ್ದಾರೆ. ಆದರೆ ಸಿನಿಕತೆಯ ನಿಜಗುಟ್ಟು, ಏನೆಂದು ಯಾರಿಗೂ ತಿಳಿದಿಲ್ಲ. ಹೈಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಗಳಂತೂ ಕಾತುರದಿಂದ ಚಿತ್ರ ಬಿಡುಗಡೆಗೆ ಹಾತೊರೆಯುತಿದ್ದಾರೆ.

ಹಿಂದೂ ಧಾರ್ಮಿಕ ಹೊಸ ವರ್ಷ ಯುಗಾದಿಯ ವಿಶೇಷಾರ್ಥಕವಾಗಿ ಬಿಡುಗಡೆಯಾಗಿದ್ದ ಪೋಸ್ಟರ್, ಸಿನಿತಾರೆಯರ, ಪ್ರಭಾವಿತರ ಸ್ಟೇಟಸ್ ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ತನ್ನದೇ ಆದ ಛಾಪು ಮೂಡಿಸಿದೆ. ಲೈಫ್ ಈಸ್ ಶಾರ್ಟ್ ಚಿತ್ರದ ಜೋಡಿಯೇ ಪ್ರಾಮಿಸ್ ಪೋಸ್ಟರ್ ಮೂಲಕ ಮತ್ತೊಮ್ಮೆ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಈ ಚಿತ್ರವು ಮಲಗೊಂಡ ಫಿಲಂ ಎಂಟರ್ಟೈನ್ಮೆಂಟ್ಸ್ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ ಲಕ್ಕಿ ಎಸ್ ವಿ ನಿರ್ದೇಶನದಲ್ಲಿ, ರವಿ ಕುಂಟೋಜಿ ಛಾಯಾಗ್ರಹಣ, ಸಹಕಾರ ನಿರ್ದೇಶಕ ಪವನ್ ಕುಮಾರ್ ಬೂದಿಹಾಳ, ಸಹನಿರ್ದೇಶಕ ಮಲ್ಲು ಎನ್ ವಿ, ಪ್ರೊಡಕ್ಷನ್ ಹೆಡ್ ರಂಜೀತ್ ಕಾರ್ಕಾಳ, ಪೋಸ್ಟರ್ ಡಿಸೈನ್ ಸುಭಾಷ್ ಅರಸ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವಿರೇಶ್ ಹಂಡಗಿ, ಹರೀಶ್ ಅರಸು, ಉಮೇಶ್ ಕೆ. ಎನ್, ಹನಮಂತ ಐಹೊಳೆ ಸೇರಿದಂತೆ ಇನ್ನಿತರರು ತಂಡದಲ್ಲಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group