Bidar: ನೀರಿಗಾಗಿ ಪ್ರಾಣ ಕೊಡಲು ಮುಂದಾದ ಯುವಕ

Must Read

ಬೀದರ – ಕುಡಿಯಲು ನೀರು ಕೊಡಿ, ಇಲ್ಲವಾದರೆ ನಾವು ಪ್ರಾಣ ಬಿಡುತ್ತೇವೆ ಎಂದು ಜಿಲ್ಲೆಯ ಎಕಲರ ಗ್ರಾಮ ಪಂಚಾಯತ ಮುಂದೆ ಇರುವ ಗಿಡಕ್ಕೆ ಹಗ್ಗ ಹಾಕಿ ನೇಣು ಹಾಕಲು ಪ್ರಯತ್ನ ಮಾಡಿದ ಯುವಕ.

ನಮ್ಮ ಗ್ರಾಮಕ್ಕೆ ಕುಡಿಯಲು ನೀರು ಇಲ್ಲ ನಾವು ನಮ್ಮ ಮಕ್ಕಳು ಹೇಗೆ ಬದುಕ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ತರು.

ಜಿಲ್ಲೆಯ ತುಳಜಾಪುರ ಗ್ರಾಮದ ಹೆಣ್ಣು ಮಕ್ಕಳು ಮತ್ತು ಹಿರಿಯರು ನೀರಿಗಾಗಿ ಎಕಲರ ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ ಕುಡಿಯುವ ನೀರಿಗಾಗಿ ಹೋರಾಟ ಮಾಡುವ ವೇಳೆ ತುಳಜಾಪುರ ಗ್ರಾಮದ ಯುವಕ ಎಕಲರ್ ಗ್ರಾಮ ಪಂಚಾಯತಿ ಮುಂದೆ ನೇಣು ಬಿಗಿದುಕೊಂಡು ಪ್ರಾಣ ಬಿಡುವುದಾಗಿ ಹೈಡ್ರಾಮ ಮಾಡಿದ ಘಟನೆ ನಡೆದಿದೆ.

ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ತವರೂರಿನಲ್ಲಿ ಈ ಘಟನೆ ನಡೆದಿದ್ದು ಬೀದರ ಜಿಲ್ಲೆಯಲ್ಲಿ ಬಿಸಿಲು ಅತಿ ಹೆಚ್ಚಾಗಿರುವುದರಿಂದ ಕೆಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಅಂಥ ಕೆಲವು ಹಳ್ಳಿಗಳಲ್ಲಿ ತುಳಜಾಪುರ ಹಾಗೂ ಎಕಲಾರ ಗ್ರಾಮಗಳ ನಾಗರಿಕರು ಎರಡು ದಿವಸ ದಿಂದ ನಿರಂತರ ವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿ ಮುಂದೆ ಬಂದಿದ್ದು ಈ ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group