ಸಿಂದಗಿ: ಪಂಚಮಸಾಲಿ ಸಮಾಜ ಬಾಂಧವರಿಗೆ 2ಎ ಮೀಸಲಾತಿ ಬೇಕೇ ಬೇಕು ಎಂಬ ಉದ್ದೇಶದಿಂದ ಧರ್ಮಕ್ಷೇತ್ರ ಕೂಡಲಸಂಗಮದಲ್ಲಿ 21 ನೇ ಎಪ್ರಿಲ್ 2022 ರಿಂದ ನಿರಂತರವಾದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಧರಣಿ ಸತ್ಯಾಗ್ರಹದ ಮುಂದುವರೆದ ಭಾಗವಾಗಿ ಮೇ.2 ರಂದು ವಿಜಯಪುರ ಜಿಲ್ಲೆಯ ಪಂಚಮಸಾಲಿ ಸಮಾಜದವರು ಭಾಗಿಯಾಗಿ 2ಎ ಹೋರಾಟಕ್ಕೆ ಬಲ ನೀಡಲಿದ್ದಾರೆ. ಹೀಗಾಗಿ ಅಖಂಡ ಸಿಂದಗಿ ತಾಲ್ಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಮೇ.2 ರಂದು ಬೆಳಿಗ್ಗೆ 8 ಗ0ಟೆಗೆ ಕೂಡಲ ಸಂಗಮದಲ್ಲಿ ನಡೆಯುವ ಈ ಧರಣಿ ಸತ್ಯಾಗ್ರಹದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಸಮಾಜದ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಶ್ರೀಗಳು ಸಮಾಜದ ಏಳಿಗೆಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ಭಾಗವಹಿಸಿ ಧರಣಿ ಸತ್ಯಾಗ್ರಹವನ್ನು ಯಶಸ್ವಿಗೊಳಿಸಬೇಕೆಂದು ಸಿಂದಗಿ ತಾಲ್ಲೂಕಿನ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ ಸೇರಿದಂತೆ ಸರ್ವ ಪದಾಧಿಕಾರಿಗಳು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

