ಸವದತ್ತಿಃ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಆರ್.ಪಿ ಹಾಗೂ ಬಿ.ಆರ್.ಪಿ ಮತ್ತು ಬಿ.ಐ.ಇ.ಆರ್.ಟಿ ಸೇರಿದಂತೆ ಕ್ಲಸ್ಟರ್ ಹಂತದ ಅನುಷ್ಠಾನಾಧಿಕಾರಿಗಳ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಸಿ.ಕರೀಕಟ್ಟಿಯವರು ನಡೆಸಿದರು.
“ಶಾಲೆಗಳು ಆರಂಭವಾಗಿದ್ದು ಕಲಿಕಾ ಚೇತರಿಕೆ ಚಟುವಟಿಕೆಗಳು ಜರುಗುತ್ತಿವೆ. ಮತ್ತೊಂದೆಡೆ ಮಳೆಗಾಲ. ಮಕ್ಕಳ ವ್ಯಾಸಂಗಕ್ಕೆ ಯೋಗ್ಯವಲ್ಲದ ಕೊಠಡಿಗಳಿದ್ದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರುವಂತೆ ಅನುಷ್ಠಾನಾಧಿಕಾರಿಗಳಿಗೆ ತಿಳಿಸುವ ಜೊತೆಗೆ ಕೋವಿಡ್ ಲಸಿಕೆಯ ಕುರಿತಂತೆ ಮಕ್ಕಳಿಗೆ ಮತ್ತು ಬೂಸ್ಟರ್ ಡೋಜ್ ಹಾಕಿಸಿಕೊಳ್ಳುವ ಜೊತೆಗೆ ಶಾರೀರಿಕ ಆರೋಗ್ಯವನ್ನು ಕಾಯ್ದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಂತಾಗಬೇಕು.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅನುಷ್ಠಾನಾಧಿಕಾರಿಗಳೂ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಉಸ್ತುವಾರಿ ವಹಿಸುವ ಜೊತೆಗೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲಾಖೆಯ ಕೊಂಡಿಯಂತೆ ತಾವೆಲ್ಲರೂ ಕಾರ್ಯ ನಿರ್ವಹಿಸಬೇಕು” ಎಂದು ಕರೆ ನೀಡಿದರು.
ತಾಲೂಕಿನ ವೈದ್ಯಾಧಿಕಾರಿಗಳಾದ ಡಾ.ಮಹೇಶ ಚಿತ್ರರಗಿ ಮಾತನಾಡಿ “ ಎಲ್ಲ ಶಿಕ್ಷಕರು ಬಿ.ಪಿ ಮತ್ತು ಶುಗರ್ ತಪಾಸಣೆಯನ್ನು ಮಾಡಿಸಕೊಳ್ಳಲು ಆರೋಗ್ಯ ಇಲಾಖೆ ಹಮ್ಮಿಕೊಂಡ ಅಭಿಯಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಏರ್ಪಾಟು ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು ತಮ್ಮನ್ನು ಸಂಪರ್ಕಿಸುವರು.
ಆ ಸಂದರ್ಭದಲ್ಲಿ ತಾವು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವ ಮೂಲಕ ಸ್ವಸ್ಥ ಆರೋಗ್ಯ ಸದೃಡ ದೇಹ ಉತ್ತಮ ಮನಸ್ಸನ್ನು ಹೊಂದುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ.ನಿಮ್ಮ ಆರೋಗ್ಯ ನಮ್ಮ ಕಾಳಜಿ” ಎಂದು ಆರೋಗ್ಯ ಇಲಾಖೆ ಹಮ್ಮಿಕೊಂಡ ಚಟುವಟಿಕೆಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವೈ.ತುಬಾಕಿ. ದೈಹಿಕ ಶಿಕ್ಷಣಾಧಿಕಾರಿಗಳಾದ ವೈ.ಎಂ.ಶಿಂಧೆ ಸೇರಿದಂತೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ. ಡಾ.ಬಿ.ಐ.ಚಿನಗುಡಿ.ವ್ಹಿ.ಸಿ.ಹಿರೇಮಠ. ರತ್ನಾ ಸೇತಸನದಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ. ಸಿ.ವ್ಹಿ.ಬಾರ್ಕಿ. ವೈ.ಬಿ.ಕಡಕೋಳ. ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ. ಗುರುನಾಥ ಕರಾಳೆ ಹಾಗೂ ತಾಲೂಕಿನ ವಿವಿಧ ವಲಯಗಳ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಎಂ.ಡಿ.ಹುದ್ದಾರ ಸ್ವಾಗತಿಸಿದರು. ಗುರುನಾಥ ಕರಾಳೆ ವಂದಿಸಿದರು.