- Advertisement -
ಬೀದರ – ಅನ್ಯ ಕೋಮಿನ ಕುರಿತು ಯುವಕನೊಬ್ಬ ವಿವಾದಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿನ್ನೆ ರಾತ್ರಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಯಿತು.
ಪ್ರವಾದಿ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಯುವಕನ ಬಂಧನಕ್ಕೆ ನೂರಾರು ಮುಸ್ಲಿಂ ಸಮುದಾಯದವರು ಪೋಲಿಸ್ ಠಾಣೆ ಮುಂದೆ ಜಮಾವಣೆಗೊಂಡು ಯುವಕನ ಬಂಧನಕ್ಕೆ ಆಗ್ರಹಿಸಿದರು.
ರಾಜಕುಮಾರ ಮಜಗೆ ಎಂಬ ಯುವಕ ಎಕ್ಟಿವ್ ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನ ಕಾರಿ ಪೋಸ್ಟ್ ಹಾಕಿದ್ದ ಕಾರಣ ಆತನನ್ನು ಪೊಲೀಸರು ಬಂಧಿಸಿದರು. ಇದರಿಂದ ಮುಸ್ಲಿಮರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು. ಸದ್ಯ ಪರಿಸ್ಥಿತಿ ಶಾಂತವಾಗಿದ್ದರೂ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ
ಈ ಟೈಮ್ಸ್ ಚಾನಲ್ ನಲ್ಲಿ 24 ಗಂಟೆಯ ದಿನದ ಶೋ ನಲ್ಲಿ 22 ಗಂಟೇ ಬಿಜೆಪಿ ಪರ, ಕಾಂಗಿ ಅಥವಾ ವಿರೋದ ಪಕ್ಷಗಳ ವಿರುದ್ದವಾಗಿರುತ್ತೇ, ಆ ಅರ್ಬ್ ಗೆ ಆದ ಕೆಲಸ ಇವರಿಗು ಆದರೇ ಸರಿಹೋಗಬಹುದು, ಇವರು ಸಮಾಚಾರ ಬಿತ್ತರಿಸಲ್ಲಾ ,ಸ್ರುಷ್ಟಿಸುತ್ತಾರೆ