ಚುಟುಕುಗಳು

Must Read

…ಕಟು ವಾಸ್ತವ….

ಗಾಂಧಿ ತತ್ವವನ್ನು
ನಾವು ಪಾಲಿಸುತ್ತಿದ್ದೇವೆ,
ರಸ್ತೆಗೆ, ಉದ್ಯಾನವನಕೆ
ಗಾಂಧಿ ಹೆಸರು ಕೊಟ್ಟಿದ್ದೇವೆ,
ಗಾಂಧಿ ತತ್ವಗಳ ಜೊತೆ
ಅವರ ಭಾವಚಿತ್ರಕೆ ಫ್ರೇಂ ಹಾಕಿ,
ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!!


………ಆದರ್ಶ ಭಾರತ……..

‘ಆದರ್ಶ ಭಾರತ ‘ಕಟ್ಟೋಣವೆಂದು
ಕಂಡಕಂಡಲ್ಲಿ ಭಾಷಣ ಬಿಗಿಯುವ
ಖಾದಿ ತೊಟ್ಟ ವೀರರೇ
ನಿಮ್ಮ ಸಂತಾನವನ್ನು
ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ,
ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ.


………ಕಪ್ಪೆಗಳು………

ಕಪ್ಪೆಗಳು , ಇವು ಕಪ್ಪೆಗಳು
ತಾವೂ ಮೇಲೆ ಬರವು,
ಇನ್ನೊಬ್ಬರನೂ ಮೇಲೆ ಬಿಡೆವು,
ಅದರ ಕಾಲ ಇದು,ಇದರ ಬಾಲ ಅದು
ಜಗ್ಗುತ್ತಾ,ಜಗ್ಗುತ್ತಾ…ಇದ್ದಲ್ಲೇ ಇರುವವು
ಬಾವಿಯೊಳಗಿನ ಈ ಕಪ್ಪೆಗಳು

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group