ದುಷ್ಟರೆ ಎಚ್ಚರ !!
ಸ್ವಂತ ನೆಮ್ಮದಿಗಾಗಿ
ಸ್ವಂತ ಸ್ವಾರ್ಥಕ್ಕಾಗಿ
ಸ್ವಂತ ಗೆಲ್ಲುವಿಕೆಗಾಗಿ
ಸ್ವಂತ ಪ್ರತಿಷ್ಠೆಗಾಗಿ
ಸ್ವಹಿತ ಸಾಧನೆಗಾಗಿ
ಪವಿತ್ರ ಮನಗಳನ್ನು
ಮರ್ಯಾದೆಗಂಜಿ ಬಾಳುವವರ
ಮುಗ್ಧ ಹೃದಯಿಗಳ ಜೇವನವನ್ನು ದುರ್ಮಾರ್ಗದಿಂದ
ದುಷ್ಟ ಶಕ್ತಿಗಳ
ಪ್ರಯೋಗದಿಂದ
ಗೌರವದಿಂದ ಬಾಳುವವರ
ಬದುಕಿಗೆ ಬರೆ ಹಾಕಬಾರದು
ಮಾತಿನಿಂದ ಇನ್ನೊಬ್ಬರ ಮನ ನೋಯಿಸಬಾರದು
ಒಳ್ಳೆಯವರ ಕಣ್ಣೀರಿಗೆ ಕಾರಣವಾಗಬಾರದು
ಅವರ ಪಾಲಿನ ಬದುಕು ಅವರಿಗಿರಬೇಕು.
ನೀತಿವಂತರ ಉತ್ತಮ
ಸುಖಜೀವನವನ್ನು ನೋಡಿ
ಸಂತೋಷ ಪಡಬೇಕು
ಕೆಟ್ಟದ್ದು ಮಾಡಬಾರದು.
ಬೆನ್ನಿಗೆ ಚೂರಿ ಹಾಕೋ ಕೆಟ್ಟ
ಕೆಲಸ ಮಾಡಬಾರದು
ಹಾಗೇನಾದ್ರೂ ಮೋಸ ಮಾಡಿದ್ರೆ ಅದು ಅವರಿಗೆಸಗಿದ
ಸಾವಿರ ಪಟ್ಟು ನಿಮಗೆ
ಕೆಟ್ಟದ್ದಾಗುತ್ತದೆ ಇದು
ಈ ಕಲಿಗಾಲದ ಕಲ್ಕಿಯ
ಮಹಿಮೆ.
ದುಷ್ಟ ಕೆಲಸ ಮಾಡೋ ದುರ್ಜನರೇ
ಎಚ್ಚರ ಎಚ್ಚರ ಎಚ್ಚರ…
ಉಮಾದೇವಿ. ಯು. ತೋಟಗಿ
ಸ. ಶಿ. ಸ. ಹಿ. ಪ್ರಾ. ಶಾ. ರಾಮಪುರ.
ತಾ. ಸವದತ್ತಿ. ಜಿ. ಬೆಳಗಾವಿ