ಉತ್ತಮ ಶಿಕ್ಷಕರಿಗೆ ಸನ್ಮಾನ

Must Read

ಮೂಡಲಗಿ: ದಾರವಾಡದ ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನದ ವತಿಯಿಂದ ದಿ. ಶ್ಯಾಮರಾವ್ ನರಸೋಪಂತ ಕುಲಕರ್ಣಿ ಅವರ ಸ್ಮರಣಾರ್ಥ ನಿವೃತ್ತ ಗುರುಮಾತೆ ಸರೋಜಿನಿ ಶ್ಯಾಮರಾವ್ ಕುಲಕರ್ಣಿಯವರು ನೀಡುವ ೨೦೨೧-೨೨ ನೇಯ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹಡಗಿನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಈರಪ್ಪ ಹಳ್ಳಿ, ಖಾನಟ್ಟಿಯ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ನಾಗೇಂದ್ರ ನಡೋಣಿಯವರು ಆಯ್ಕೆಯಾಗಿದ್ದಾರೆ.

ಸೆ. ೫ ರಂದು ಮುಂಜಾನೆ ೧೧ ಗಂಟೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ-೨೦೨೨ ನಿಮಿತ್ತ ಅರಭಾವಿಯ ಶ್ರೀ ಬಸವೇಶ್ವರ ಸಭಾ ಭವನ ಫ್ಯಾಕ್ಟರಿ ಕ್ರಾಸ್‌ದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಸಾಧಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಗೌರವಿಸಲಾಗುವದು ಎಂದು ಪ್ರಕಟಣೆಯಲ್ಲಿ ಆರ್.ಎಸ್ ಕುಲಕರ್ಣಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group