ಕಲ್ಲೋಳಿ ಮಹಾಲಕ್ಷ್ಮೀ ಸಹಕಾರಿಗೆ ರೂ. 1.4 ಕೋಟಿ ಲಾಭ- ಸಂಸದ ಕಡಾಡಿ

Must Read

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು ಸನ್ 2021-22ನೇ ಸಾಲಿನಲ್ಲಿ ರೂ 1.4 ಕೋಟಿ ರೂ ಲಾಭಗಳಿಸಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ, ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಸೆ.16 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.ಕಲ್ಲೋಳಿ ಇದರ ಸನ್ 2021-22ನೇ ಸಾಲಿನ 20ನೇ ಸರ್ವ ಸಾಮಾನ್ಯ ಸಭೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಎಲ್ಲ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ಘೋಷಿಸಿದ ಅವರು ಸಂಘವು ಸ್ವಂತ ಕಟ್ಟಡ ಹೊಂದಿ, 5673 ಸದಸ್ಯರ ರೂ-13.40 ಲಕ್ಷ ಶೇರ ಬಂಡವಾಳ, ಗ್ರಾಹಕರಿಂದ ರೂ-28.22 ಕೋಟಿ ಠೇವಣಿ ಹೊಂದಿದ್ದು, ರೂ-3.94 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಎಂದರಲ್ಲದೇ ಗಾಹ್ರಕರಿಗೆ ರೂ-29.60 ಕೋಟಿ ವಿವಿಧ ಸಾಲ ವಿತರಿಸಲಾಗಿದೆ ಎಂದರು.

ದಿ.ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಸಹಕಾರಿಗಳ ಆರ್ಥಿಕ ಮಟ್ಟ ಸುಧಾರಿಸಲು ಸಂಸ್ಥೆ ಬದ್ದವಾಗಿದೆ ಎಂದರು.

ಸಹಕಾರಿ ರಂಗದ ಹಿರಿಯ ದುರೀಣ, ಜಿಲ್ಲೆಯ ಅಭಿವೃದಿಯ ಹರಿಕಾರ ಕರ್ನಾಟಕ ಸರಕಾರದ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ದಿವಂಗತ ಉಮೇಶ್ ಕತ್ತಿ ಅವರಿಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಆಚರಿಸಲಾಯಿತು.

ಸಹಕಾರಿಯ ಲೆಕ್ಕಪರಿಶೋಧಕ ಸತೀಶ ನಾಡಗೌಡ, ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ನಿರ್ದೆಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ವ್ಯಾಪಾರಿ, ಮಾರುತಿ ಮಕ್ಕಳಗೇರಿ, ಮಲ್ಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ನಿಂಗಪ್ಪ ಮಿಡಕನಟ್ಟಿ ಉಪಸ್ಥಿತರಿದ್ದರು.

ಬೆಟಗೇರಿ ಶಾಖೆಯ ಸಲಹಾ ಸಮಿತಿ ಉಪಾಧ್ಯಕ್ಷರಾದ ಮಾಯಪ್ಪ ಬಾಣಸಿ, ನಿಂಗಪ್ಪ ನೀಲನ್ನವರ, ಬಸಪ್ಪ ಗೌಡರ,ರಮೇಶ ಬ್ಯಾಗಿ, ಮಹಾದೇವ ಸವತಿಕಾಯಿ, ಘಟಪ್ರಭಾ ಶಾಖೆಯ ಅಧ್ಯಕ್ಷ ಬಸವರಾಜ ಕತ್ತಿ, ಉಪಾಧ್ಯಕ್ಷ ರಾಮಚಂದ್ರ ಕೊಡ್ಲಿ, ಸಚಿನ ಕಡಬಡಿ, ಹಾಲಪ್ಪ ಕರಿಗಾರ, ದುಂಡಪ್ಪ ನಿಂಗನ್ನವರ, ಭೀಮಶಿ ಬಂಗಾರಿ ಭಾಗವಹಿಸಿದ್ದರು.

ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ಸ್ವಾಗತಿಸಿದರು. ರಾಜಶೇಖರ ಕುರಬೇಟ ವಾರ್ಷಿಕ ವರದಿ ಓದಿದರು, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಕಾರ್ಯಕ್ರಮ ನಿರೂಪಿಸಿದರು, ಮಹಾಂತೇಶ ಕಡಾಡಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group