ಸಿಂದಗಿ : ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಬೆಳಕಿಗೆ ತರಲು ಶಿಕ್ಷಕರೊಂದಿಗೆ ಪಾಲಕರು ಪಾತ್ರ ಮೇಲು ಕಾಣಬೇಕು. ಶೈಕ್ಷಣಿಕ ಬೆಳೆವಣಿಗೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಇದು ಉತ್ತಮ ವೇದಿಕೆಯಾಗಿದೆ ಎಂದು ಬಿಆರ್‍ಪಿ ಶ್ರೀಮತಿ ಶ್ರೀದೇವಿ ರೆಬಿನಾಳ ತಿಳಿಸಿದರು.
ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಸಿಂದಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ/ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಗುರಿ ಬಲು ಮುಖ್ಯ ಗುರಿ ಇಲ್ಲದೇ ನಾವು ಕೂಡ ಸಾಧಿಸಲು ಸಾಧ್ಯವಿಲ್ಲ ಕಾರಣ ಮುಂದೆ ನಿಖರ ಹಾಗೂ ಪ್ರಮುಖವಾದ ಗುರಿ ಇರಬೇಕು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳು ದೇಶ ಮಟ್ಟದಲ್ಲಿ ತಮ್ಮ ಪ್ರತಿಭಾ ಅರಳಲು ಈ ಪ್ರತಿಭಾ ಕಾರಂಜಿ ಅವಶ್ಯಕ ಇದೆ ತಾವು ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಇಸಿಓ ಆನಂದ ಮಾಡಗಿ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಬೆಳೆಸಲು ಶಿಕ್ಷಕರು ಶ್ರಮಿಸಬೇಕು ವಿದ್ಯಾರ್ಥಿಗಳಲ್ಲಿ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಶಿಕ್ಷಕರು ಬಿತ್ತುವ ಕಾರ್ಯ ನಿರಂತರವಾಗಿರಬೇಕು ಎಂದು ತಿಳಿಸಿದರು.
ಎಸ್‍ಡಿಎಂಸಿ ಅದ್ಯಕ್ಷ ಎಂ.ಡಿ.ಮರ್ತುರ ಮಾತನಾಡಿ, ಯಾವುದೇ ಮಗು ಇರಲಿ ಮಗುವಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸರಕಾರ ಮೇಲಿಂದ ಮೇಲೆ ವೇದಿಕೆಗಳನ್ನು ರೂಪಿಸಬೇಕು ಎಂದರು.
ಮೋರಟಗಿ ಉರ್ದು ಸಿಆರ್ಪಿ ಗುಲಾಬ ನದಾಫ್, ಕಲಕೆರಿ ಸಿಆರ್ಪಿ ಎ.ಐ.ಮಣೂರ, ಶಿಕ್ಷಕರ ಪ್ರತಿನಿಧಿ ಜಾಕೀರ ಮನಿಯಾರ ವೇದಿಕೆ ಮೇಲಿದ್ದರು.
ಶಿಕ್ಷಕ ಎಂ.ಆರ್.ಡೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಅರ್.ಎಂ.ಕುಮಸಗಿ ಸ್ವಾಗತಿಸಿದರು. ಎ.ಡಿ.ಮುಲ್ಲಾ ವಂದಿಸಿದರು.