ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀಸಿದ್ಧಾರೂಢ ರೇಲ್ವೇ ನಿಲ್ದಾಣದ ಪ್ಲಾಟ್ ಫಾರಂ ಈಗ ವಿಶ್ವದಲ್ಲಿಯೇ ಅತಿ ಉದ್ದದ ಪ್ಲಾಟ್ ಫಾರಂ ಆಗಿ ಹೊರಹೊಮ್ಮಿದೆ.
ಸುಮಾರು ಒಂದೂವರೆ ಕಿಮೀ ಉದ್ದದ ರೇಲ್ವೇ ಪ್ಲಾಟ್ ಫಾರಂ ಇದಾಗಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಸಮರ್ಪಿಸಿದರು.
ಸುಮಾರು ೧೩೬೬ ಮೀಟರ್ ಉದ್ದವಿದ್ದ ಉತ್ತರ ಪ್ರದೇಶದ ಗೋರಖಪುರ ರೇಲ್ವೆ ಪ್ಲಾಟ್ ಫಾರಂ ಈವರೆಗಿನ ಅತಿ ಉದ್ದದ ಪ್ಲಾಟ್ ಫಾರಂ ಆಗಿತ್ತು ಆ ದಾಖಲೆಯನ್ನು ಹುಬ್ಬಳ್ಳಿಯ ಸಿದ್ಧಾರೂಢ ರೇಲ್ವೇ ಪ್ಲಾಟ್ ಫಾರಂ ತನ್ನದಾಗಿಸಿಕೊಂಡಿದೆ.
ಅತಿ ವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯು ದೇಶದ ಉನ್ನತ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ಈ ಹಿನ್ನೆಲೆಯಲ್ಲಿ ಮೊದಲು ಐದು ಪ್ಲಾಟ್ ಫಾರಂ ಹೊಂದಿದ್ದ ಈ ರೇಲ್ವೇ ನಿಲ್ದಾಣಕ್ಕೆ ಈಗ ಎಂಟು ಪ್ಲಾಟ್ ಫಾರಂ ಗಳನ್ನು ರಚನೆ ಮಾಡಲಾಗಿದೆ. ಇದು ಕೂಡ ದಾಖಲೆಯಾಗಿದ್ದು ಹುಬ್ಬಳ್ಳಿಯ ಸಿದ್ದಾರೂಢ ರೇಲ್ವೇ ನಿಲ್ದಾಣವೀಗ ಜಗತ್ಪ್ರಾಸಿದ್ಧಿ ಪಡೆದಿದೆ.