ವ್ಯವಸಾಯ ಸೇವಾ ಸಂಘಗಳಿಗೆ ರೈತರೆ ಜೀವಾಳ

Must Read

ಸಿಂದಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಳೆಯಲು ರೈತರ ಸಹಕಾರ ಮುಖ್ಯ ಹಾಗೂ ಸಂಘಕ್ಕೆ ರೈತರೇ ಜೀವಾಳ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಕಣಮೇಶ್ವರ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ದೇವಣಗಾಂವ ಸುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಗ್ರಾಮದಲ್ಲಿ ನೂತನ ಪಿಎಲ್‍ಡಿ ಬ್ಯಾಂಕ್ ಶಾಖೆ ತೆರೆಯಬೇಕೆಂದು ಜಿಲ್ಲಾಧ್ಯಕ್ಷರಾದ ಶಿವಾನಂದ ಪಾಟೀಲರಿಗೆ ಒತ್ತಾಯಿಸಲಾಗಿದೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಕೆವಿಜಿಬಿ ಬ್ಯಾಂಕ್ ವ್ಯವಸ್ಥಾಪಕ ಅಸ್ಮತ ಚಿನ್ನಕೋಟಿ ಮಾತನಾಡಿ, ರೈತರು ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಸಾಲ ತಗೆದು ಕೊಂಡು ಅಷ್ಟೆ ಜವಾಬ್ದಾರಿಯಿಂದ ಮರುಪಾವತಿ ಮಾಡಬೇಕು ಅಂದಾಗ ಬ್ಯಾಂಕ್ ಮತ್ತು ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು

ಸಾನ್ನಿಧ್ಯ ಹಿರಿಯರಾದ ವೇ.ಈರಯ್ಯ ಮಠ, ಜಿಪಂ ಮಾಜಿ ಸದಸ್ಯ ಸಂಘದ ಉಪಾಧ್ಯಕ್ಷ ಕಾಶಿನಾಥ ಗಂಗನಳ್ಳಿ, ಈರಣ್ಣ ಕಲಶೆಟ್ಟಿ, ಶಂಕರಲಿಂಗ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ಗಾಲೀಬ ಸೋಮನಾಯಕ, ರವೀಂದ್ರ ಕಲಶೆಟ್ಟಿ, ಸಾಯಬಣ್ಣ ನಾಗಠಾಣ, ಬಸಪ್ಪ ದಾನೇನವರ, ಶ್ರೀದೇವಿ ಗಂಗನಳ್ಳಿ, ಅನ್ನಪೂರ್ಣ ಕುಂಬಾರ ಸಿಇಓ ಮಂಜುಳಾ ಬಿರಾದಾರ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪೂರ, ಯಲ್ಲಪ್ಪ ತಳವಾರ, ಮುತ್ತು ಕಲಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group