ಶಾಲಾ ಕೊಠಡಿಯಲ್ಲಿ ಸೋಯಾ ಚೀಲ ಇಟ್ಟ ಶಿಕ್ಷಕಿ; ಮಕಾಡೆ ಮಲಗಿದ ಮಹಾನ್ ವ್ಯಕ್ತಿಗಳ ಚಿತ್ರಗಳು !

Must Read

ಬೀದರ – ಶಿಕ್ಷಣ ಸಚಿವರು ನೋಡಲೇಬೇಕಾದ ಪ್ರಕರಣವಿದು. ವಿದ್ಯೆ ಕಲಿಸಲ್ಪಡುವ ಶಾಲೆಯಲ್ಲಿ ಸೋಯಾ ಚೀಲಗಳನ್ನು ಹಚ್ಚಿ ಇಟ್ಟು ಶಾಲಾ ಕೊಠಡಿಯನ್ನೇ ಗೋದಾಮು ಮಾಡಿದ ಶಿಕ್ಷಕಿ.

ಸರ್ಕಾರಿ ಶಾಲೆಯನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡರೂ ಕ್ಯಾರೇ ಎನ್ನದ ಶಾಲೆಯ ಮುಖ್ಯ ಶಿಕ್ಷಕಿ, ಮಕ್ಕಳ  ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಿ ಶಾಲೆಯ ಶಿಕ್ಷಕರು. ಶಾಲೆ ರಜೆ ಮುಗಿದು ಶಾಲೆ  ಪುನರ್ ಆರಂಭ ದಿನವೇ ಸರ್ಕಾರಿ ಶಾಲೆಯ ಶಿಕ್ಷಕಿ ಮಾಡಿದ ಎಡವಟ್ಟು.ಶಾಲೆಯ ವರ್ಗ ಕೋಣೆಯಲ್ಲಿ ಸೋಯಾಬಿನ್ ಹಾಕಲು ಅನುವು ಮಾಡಿಕೊಟ್ಟ ಅಲ್ಲಿನ ಮುಖ್ಯ ಶಿಕ್ಷಕಿ.

ಶಿಕ್ಷಣ ಸಚಿವರು ನೋಡಲೇಬೇಕಾದ ಈ ಸ್ಟೋರಿ:

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೊರಂಬಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ  ಈ ಘಟನೆ ನಡೆದಿದೆ.

ಸರ್ಕಾರಿ ಸಂಬಳ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳು ಖಾಸಗಿ ಶಾಲೆಯ ಕೆಲಸಕ್ಕೆ ಸರ್ಕಾರಿ ಶಾಲೆಯನ್ನು ಬಳಸಲು ಅನುವು ಮಾಡಿಕೊಟ್ಟಿದ್ದಾದರು ಯಾಕೆ?

ಇಲ್ಲಿನ ಶಿಕ್ಷಕರು ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದ್ದಾರಾ ಹಾಗಾದರೆ ಇವರಿಗೆ ಮೇಲಾಧಿಕಾರಿಗಳ ಹಿಡಿತ ಇಲ್ಲವೇ?

ಪಾಲಕರು ಶಾಲೆಗೆ ಭೇಟಿ ಕೊಟ್ಟಾಗ ವರ್ಗ ಕೋಣೆಯಲ್ಲಿ ಸೋಯಾಬಿನ್ ಹಾಕಿರುವುದು ಗಮನಕ್ಕೆ ಬಂದಾಗ ವಿಚಾರಿಸಿದಾಗ ತಮಗೂ ಅದಕ್ಕೂ ಸಂಬಂಧವಿಲ್ಲವಂತೆ ಮಾತನಾಡುತ್ತಿದ್ದಾರೆ. ಶಾಲೆಯ ಆವರಣ ಹಾಗೂ ವರ್ಗ ಕೋಣೆಗಳು ಸಂಪೂರ್ಣ  ಅಸ್ವಚ್ಛತೆಯಿಂದ ಕೂಡಿದ್ದು ಎಲ್ಲೆಂದರಲ್ಲಿ ಕಸ ತಾಂಡವವಾಡುತ್ತಿದೆ.

ಇದರ ಜೊತೆಗೇ ಶಾಲೆಯಲ್ಲಿ ದೇಶದ ಮಹಾನ್ ವ್ಯಕ್ತಿಗಳ ಫೋಟೊಗಳನ್ನು ಟೇಬಲ್ ಮೇಲೆ ಪೇರಿಸಿಟ್ಟು ಆ ವ್ಯಕ್ತಿಗಳಿಗೆ ಅವಮಾನ ಮಾಡಿದ ಮುಖ್ಯ ಶಿಕ್ಷಕಿ  ಮತ್ತು ಸಿಬ್ಬಂದಿ ವರ್ಗದವರು.

ನೂರು ಮಕ್ಕಳ ಹಾಜರಾತಿಯಲ್ಲಿ ಕೇವಲ 35 ರಿಂದ 40 ವಿದ್ಯಾರ್ಥಿಗಳು ಹಾಜರಾತಿ ಇರುತ್ತಿದ್ದು, ಇನ್ನುಳಿದ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆಂಬುದು ಕೇಳಿಬಂದಿದೆ. ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಖಾಸಗಿ ಶಾಲೆಯೊಂದಿಗೆ ಕೈಜೋಡಿಸಿದ್ದಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಕೂಡಲೇ ಶಾಲೆಯ ಮುಖ್ಯ ಶಿಕ್ಷಕಿಯ ಮೇಲೆ ಹಾಗೂ ಸಿಬ್ಬಂದಿ ವರ್ಗದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು  ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಪಾಲಕರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group