spot_img
spot_img

ಬೀದರ್ ಜಿಲ್ಲೆಯಲ್ಲಿ ಎರಡು ಕಡೆ ಜನಸಂಕಲ್ಪ ಯಾತ್ರೆ

Must Read

- Advertisement -

ಔರಾದ್ ಹಾಗೂ ಹುಮನಾಬಾದ್ ಸಂಕಲ್ಪ ಯಾತ್ರೆಗೆ ಹರಿದು ಬಂದ ಜನ ಸಾಗರ.

ಬೀದರ – ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಭಾರತ ಜೋಡೋ ಯಾತ್ರೆ ಆರಂಭಿಸಿದ ಬೆನ್ನಲ್ಲೆ ರಾಜ್ಯದಲ್ಲಿ ಬಿಜೆಪಿ ಎಚ್ಚೆತ್ತಿದ್ದು ಬೀದರ್ ಜಿಲ್ಲೆಯ ಔರಾದ್ ಹಾಗೂ ಹುಮನಾಬಾದನಲ್ಲಿ ಜನ ಸಂಕಲ್ಪ ಯಾತ್ರೆ ಮಾಡಿ ಕಾಂಗ್ರೆಸ್ ವಿರುದ್ಧ ಶೆಡ್ಡು ಹೊಡೆಯಲು ನಿಂತಿದೆ.

ಎಲ್ಲೆಲ್ಲೂ ಬಿಜೆಪಿ ಧ್ಚಜ,ಎಲ್ಲೆಲ್ಲು ಬಿಜೆಪಿ ಪಕ್ಷದ ಜಯಘೋಷ,ಹರಿದು ಬಂದ ಜನಸಾಗರ,ಲಂಬಾಣಿ ಮಹಿಳೆಯರ ಕುಂಭ ಮೆರವಣಿಗೆ ಈ ದೃಶ್ಯಗಳು ಕಂಡು ಬಂದಿದ್ದು ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದ‌ ಜನ ಸಂಕಲ್ಪ ಯಾತ್ರೆಯಲ್ಲಿ.

- Advertisement -

ಇವತ್ತು ಔರಾದ ಪಟ್ಟಣದಲ್ಲಿ ನಡೆದ‌ ಜನ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಾಯಿ‌ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ‌ ಕಾಂಗ್ರೆಸ್ ಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದರು. ಕಾಂಗ್ರೆಸ್ ಪಕ್ಷ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅರ್ಜಿ‌ ಹಾಕದ ವ್ಯಕ್ತಿಗೆ ನೌಕರಿ ಕೊಟ್ಟಿದೆ.ನಾವು ತನಿಖೆ ಮಾಡಿ 20 ಜನರನ್ನು ಬಂಧಿಸಿ ತನಿಖೆ ನಡೆಸಿದ್ದೇವೆ.ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ದ ಆರೋಪ ಮಾಡುವ ಮೊದಲು ದಾಖಲೆ ಕೊಡುತ್ತೇನೆ ಅದೇನು‌ ಕ್ರಮಕೈಗೊಳ್ಳುತ್ತಾರೆ ಅಂತ ಪ್ರಶ್ನಿಸಿದ್ದರು.ಇಡಿ ಭಾಷಣದುದ್ದಕ್ಕು ಕಾಂಗ್ರೆಸ್ ವಿರುದ್ದ ಹರಿಹಾಯ್ದ ಸಿಎಂ ಕಾಂಗ್ರೆಸ್ ಪಕ್ಷದ ಸಾಧನೆ ಎನು ಇಲ್ಲಾ ಅಂತಾ ಕಿಡಿ ಕಾರಿದ್ದರು.

- Advertisement -

ಇನ್ನು ಕಾರ್ಯಕ್ರಮ ಉದ್ದೇಶಿಸಿ‌ ಮಾತನಾಡಿದ ಪಶು ಸಂಗೋಪನಾ ಸಚಿವ‌ ಪ್ರಭು ಚವ್ಹಾಣ, ಜಿಲ್ಲೆ ಹಾಗೂ ಪಶು ಸಂಗೋಪನೆ ಇಲಾಖೆ ಯಲ್ಲಿ ತಾವು‌ ಮಾಡಿರುವ ಸಾಧನೆಯನ್ನು ಎಳೆಎಳೆಯಾಗಿ‌ ಬಿಚ್ಚಿಟ್ಟರು.ಈ ಮಧ್ಯೆ ಕ್ಷೇತ್ರದ ಕೆರೆ ತುಂಬಿಸಲು ಏಳು ನೂರು ಕೋಟಿ ರೂ.ಮಂಜುರು ಮಾಡಿಸಿದ್ದು ಬರುವ ದಿನಗಳಲ್ಲಿ ಔರಾದ್ ಕರೆಗಳು‌ ನೀರಿನಿಂದ ತುಂಬಿ ತುಳಕಲಿವೆ ಅಂಥಾ ಹೇಳಿದ್ದರು.

ಒಟ್ಟಾರೆ ಇಂದು ಔರಾದ್ ಹಾಗೂ ಹುಮನಾಬಾದ್ ನಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಜನ ಸಾಗರವೇ ಹರಿದು ಬಂತು. ಸರ್ಕಾರದ ಸಾಧನೆ,ಕಾಂಗ್ರೆಸ್ ವಿರುದ್ದ ಹರಿಹಾಯಲು ಸಂಕಲ್ಪ ಯಾತ್ರೆ ವೇದಿಕೆಯಾಗಿದ್ದಂತೂ ಸುಳ್ಳಲ್ಲ.ಕಾಂಗ್ರೆಸ್ ನ ಭಾರತ ಜೋಡೋ ಯಾತ್ರೆಯಲ್ಲಿ‌ ಬಿಜೆಪಿ ವಿರುದ್ದ ಹರಿಹಾಯ್ದರೆ.ಬಿಜೆಪಿ ಕಾಂಗ್ರೆಸ್ ವಿರುದ್ದ ಗುಡುಗಿದೆ. ಕಲ್ಯಾಣ ಕರ್ನಾಟಕದ ಕಿರಿಟ ಬೀದರ್ ‌ಜಿಲ್ಲೆಯಲ್ಲಿ ಜನ ಸ್ಪಂದನ ಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದಂತೂ ಸುಳ್ಳಲ್ಲ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group